ADVERTISEMENT

ರಾಜ್ಯಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕನ್ನಡಿಗ ಅಧಿಕಾರಿ ಕೆ.ಎಸ್‌. ಸೋಮಶೇಖರ್‌

ಕೋಲಾರದ ಶ್ರೀನಿವಾಸಪುರದ ಕೆ.ಎಸ್‌. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 15:43 IST
Last Updated 20 ಜನವರಿ 2024, 15:43 IST
<div class="paragraphs"><p>ಕೆ.ಎಸ್‌.ಸೋಮಶೇಖರ್‌</p></div>

ಕೆ.ಎಸ್‌.ಸೋಮಶೇಖರ್‌

   

ನವದೆಹಲಿ: ರಾಜ್ಯಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕನ್ನಡಿಗ ಅಧಿಕಾರಿ ಕೆ.ಎಸ್‌. ಸೋಮಶೇಖರ್ ಅವರನ್ನು ನೇಮಕ ಮಾಡಲಾಗಿದೆ.

ಕೋಲಾರದ ಶ್ರೀನಿವಾಸಪುರದವರಾದ ಇವರು ರಾಜ್ಯಸಭೆಯ ಇಂಟರ್‌ಪ್ರಿಟರ್ (ಏಕಕಾಲಿಕ ವ್ಯಾಖ್ಯಾನಕಾರ) ಆಗಿ 1993ರಲ್ಲಿ ಸೇವೆಗೆ ಸೇರಿದ್ದರು. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಏರಿದ ಮೊದಲ ಕನ್ನಡಿಗ ಅಧಿಕಾರಿ. ಈ ಮೊದಲು ರಾಜ್ಯಸಭೆಯ ನಿರ್ದೇಶಕರಾಗಿದ್ದರು.

ADVERTISEMENT

ಈ ಹಿಂದೆ ಕೇಂದ್ರದ ರೈಲ್ವೆ ಹಾಗೂ ಜವಳಿ ಸಚಿವರ ಆಪ್ತ ಕಾರ್ಯದರ್ಶಿಯಾಗಿದ್ದರು. ಕರ್ನಾಟಕ ರಾಜ್ಯ ಸೇವೆಗೆ ನಿಯೋಜನೆಯಲ್ಲಿ ಬಂದಿದ್ದ ಅವರು, ಪರಮೇಶ್ವರ ಉಪಮುಖ್ಯಮಂತ್ರಿಯಾಗಿದ್ದ ವೇಳೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.