ADVERTISEMENT

ಸಿಬ್ಬಂದಿಗೆ ಆರೋಗ್ಯದ ಸಲಹೆ ನೀಡಿದ ಎಡಿಜಿಪಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:25 IST
Last Updated 12 ಆಗಸ್ಟ್ 2020, 15:25 IST
ಬೆಳಗಾವಿ ತಾಲ್ಲೂಕಿನ ಮಚ್ಚೆಯ ಕೆಎಸ್‌ಆರ್‌ಪಿ 2ನೇ ಪಡೆ ಘಟಕದಲ್ಲಿ ನಿರ್ಮಿಸಿರುವ ಶಟಲ್‌ ಅಂಕಣವನ್ನು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಬುಧವಾರ ಉದ್ಘಾಟಿಸಿದರು
ಬೆಳಗಾವಿ ತಾಲ್ಲೂಕಿನ ಮಚ್ಚೆಯ ಕೆಎಸ್‌ಆರ್‌ಪಿ 2ನೇ ಪಡೆ ಘಟಕದಲ್ಲಿ ನಿರ್ಮಿಸಿರುವ ಶಟಲ್‌ ಅಂಕಣವನ್ನು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಬುಧವಾರ ಉದ್ಘಾಟಿಸಿದರು   

ಬೆಳಗಾವಿ: ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್‌ಆರ್‌ಪಿ 2ನೇ ಪಡೆಯ ಘಟಕಕ್ಕೆ ಬುಧವಾರ ಭೇಟಿ ನೀಡಿದ್ದ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಅವರು, ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಿಬ್ಬಂದಿಗೆ ಮಾಹಿತಿ–ಮಾರ್ಗದರ್ಶನ ನೀಡಿದರು.

ಸಸಿ ನೆಟ್ಟು ನೀರೆರೆದರು. ನೂತನವಾಗಿ ನಿರ್ಮಿಸಿರುವ ಶೆಟಲ್ ಕೋರ್ಟ್‌ ಹಾಗೂ ಆದಿತ್ಯ ಹಾಲು ಉತ್ಪನ್ನ ಮಳಿಗೆ ಉದ್ಘಾಟಿಸಿದರು. ಕೆಲ ಕಾಲ ಶಟಲ್‌ ಆಡಿದರು. ಬಳಿಕ ವಸತಿ ಗೃಹದ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದವರ ಕುಂದುಕೊರತೆ ವಿಚಾರಿಸಿದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್, ಕಮಾಂಡೆಂಟ್ ಹಂಜಾ ಹುಸೇನ್, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ರಮೇಶ ಬೋರಗಾವಿ, ಸಹಾಯಕ ಕಮಾಂಡೆಂಟ್‌ಗಳಾದ ಹೇಮಂತ್‌ ಕುಮಾರ್‌ ಯು.ಎನ್. ಹಾಗೂ ನಾಗೇಶ ಯಡಾಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.