ADVERTISEMENT

ಸ್ಲಿಟಿಂಗ್ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:01 IST
Last Updated 16 ಸೆಪ್ಟೆಂಬರ್ 2020, 19:01 IST
ಕೆಎಸ್‌ಆರ್‌ಟಿಸಿ ಮುದ್ರಣಾಲಯದಲ್ಲಿ ಅಳವಡಿಸಿರುವ ಸ್ಲಿಟಿಂಗ್ ಯಂತ್ರಕ್ಕೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಚಾಲನೆ ನೀಡಿದರು
ಕೆಎಸ್‌ಆರ್‌ಟಿಸಿ ಮುದ್ರಣಾಲಯದಲ್ಲಿ ಅಳವಡಿಸಿರುವ ಸ್ಲಿಟಿಂಗ್ ಯಂತ್ರಕ್ಕೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಚಾಲನೆ ನೀಡಿದರು   

ಬೆಂಗಳೂರು: ಬಸ್‌ನಲ್ಲಿ ನಿರ್ವಾಹಕರು ಬಳಸುವ ಇಟಿಎಂ ಟಿಕೆಟ್‌ ಮಷಿನ್‌ಗಳಲ್ಲಿ ಪ್ಲಾಸ್ಟಿಕ್ ರಹಿತ ಕೊಳವೆ ಅಳವಡಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ನಿಗಮದ ಮುದ್ರಣಾಲಯದಲ್ಲಿ ಅಳವಡಿಸಿರುವ ಥರ್ಮಲ್ ಕೊಳವೆ ತಯಾರಿಸುವ ಸ್ಲಿಟಿಂಗ್ ಯಂತ್ರಗಳಿಗೆ ಸಂಸ್ಥೆಯ ಅಧ್ಯಕ್ಷ ಎಂ. ಚಂದ್ರಪ್ಪ ಚಾಲನೆ ನೀಡಿದರು.

‘ದೇಶದ ಸಾರಿಗೆ ಸಂಸ್ಥೆಗಳಲ್ಲಿ ಪ್ರಥಮ ಬಾರಿಗೆ ಈ ಪ್ರಯತ್ನ ನಡೆಸಲಾಗಿದೆ. ತಲಾ ₹10 ಲಕ್ಷ ಮೌಲ್ಯದ ಎರಡು ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

‘ಒಂದು ವರ್ಷಕ್ಕೆಒಂದೂವರೆ ಕೋಟಿ ಇಂಟಿಎಂ ಕೊಳವೆಗಳ ಅಗತ್ಯವಿದೆ. ₹75 ಲಕ್ಷ ವೆಚ್ಚವಾಗುತ್ತಿತ್ತು. ಈಗ ಆ ವೆಚ್ಚ ಉಳಿತಾಯವಾಗಲಿದೆ. ನಿತ್ಯ 16 ಸಾವಿರ ಕೊಳವೆಗಳನ್ನು ತಯಾರಿಸಬಹುದಾಗಿದ್ದು, ಸಂಸ್ಥೆಗೆ ವಾರ್ಷಿಕ ₹4.80 ಕೋಟಿ ವರಮಾನ ನಿರೀಕ್ಷಿಸಲಾಗಿದೆ’ ಎಂದು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.