ADVERTISEMENT

ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತದಾನ 

​ಪ್ರಜಾವಾಣಿ ವಾರ್ತೆ
Published 19 ಮೇ 2019, 9:06 IST
Last Updated 19 ಮೇ 2019, 9:06 IST
ಕುಂದಗೋಳ ಕ್ಷೇತ್ರದ ಯರಗುಪ್ಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತ ಚಲಾಯಿಸಿದರು.
ಕುಂದಗೋಳ ಕ್ಷೇತ್ರದ ಯರಗುಪ್ಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತ ಚಲಾಯಿಸಿದರು.   

ಹುಬ್ಬಳ್ಳಿ: ಆಡಳಿತ ಮತ್ತು ವಿರೋಧ ಪಕ್ಷಕ್ಕೆ ಪ್ರತಿಷ್ಠೆಯಾಗಿರುವ, ರಾಜ್ಯದ ಗಮನ ಸೆಳೆದಿರುವ ಕುಂದಗೋಳ ಉಪ ಚುನಾವಣೆ ಭಾನುವಾರ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತ ಚಲಾಯಿಸಿದ್ದಾರೆ.

ಕ್ಷೇತ್ರದ ಯರಗುಪ್ಪಿಯಲ್ಲಿ ಅವರು ಹಕ್ಕು ಚಲಾಯಿಸಿದರು. ಬಳಿಕ ಪತಿ ಸಿ‌.ಎಸ್. ಶಿವಳ್ಳಿ ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಮತದಾನ ಬಳಿಕಕುಸುಮಾವತಿ ಶಿವಳ್ಳಿ, ಪತಿ ಸಿ‌.ಎಸ್. ಶಿವಳ್ಳಿ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕ್ಷೇತ್ರದಲ್ಲಿ 33 ಸೂಕ್ಷ್ಮ ಹಾಗೂ 38 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂಗವಿಕಲರು ತಮ್ಮ ಹಕ್ಕು ಚಲಾಯಿಸಲು ಗಾಲಿ ಕುರ್ಚಿ ಹಾಗೂ ಸಹಾಯಕರನ್ನು ನೇಮಕ ಮಾಡಲಾಗಿದೆ. 26 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ವೆಬ್‌ಕಾಸ್ಟ್‌ ಮಾಡಲಾಗಿದೆ.

ADVERTISEMENT

ಬೆಳಿಗ್ಗೆ 11 ಗಂಟೆಯವರೆಗೆ 24.20% ರಷ್ಟು ಮತದಾನವಾಗಿತ್ತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.