ADVERTISEMENT

ಸ್ವಗ್ರಾಮದತ್ತ ಕಾಫಿ ತೋಟದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 13:24 IST
Last Updated 13 ಮಾರ್ಚ್ 2020, 13:24 IST

ಮಡಿಕೇರಿ: ಕೊಡಗು ಗಡಿಭಾಗದಲ್ಲಿ ಕೊರೊನಾ ಸೋಂಕಿನ ಭೀತಿ ಎದುರಾಗಿದ್ದು ಆತಂಕಕ್ಕೆ ಒಳಗಾಗಿರುವ ಕಾಫಿ ತೋಟದ ಕಾರ್ಮಿಕರೂ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾರೆ. ಕೆಲವು ಕಾಫಿ ಎಸ್ಟೇಟ್‌ಗಳಲ್ಲಿ ಶನಿವಾರದಿಂದ ಕೆಲಸ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಜಿಲ್ಲೆಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿತ್ತು. ಕಾಫಿ, ಕಾಳು ಮೆಣಸು ಕೊಯ್ಲಿಗೆ ಬಂದಿದ್ದ ಕಾರ್ಮಿಕ ಕುಟುಂಬಗಳು ಊರಿನತ್ತ ತೆರಳುತ್ತಿವೆ. ಪ್ರತಿವರ್ಷ ಜಿಲ್ಲೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಕಾರ್ಮಿಕರು, ಕೆಲಸಕ್ಕೆ ಬರುತ್ತಾರೆ. ಸದಾ ಕಾರ್ಮಿಕರಿಂದ ಗಿಜಿಗುಡುತ್ತಿದ್ದ ತೋಟದ ಲೈನ್‌ಮನೆಗಳು ಈಗ ಬಿಕೊ ಎನ್ನುತ್ತಿವೆ.

ಜತೆಗೆ ಕೇರಳದಲ್ಲಿ ಹಕ್ಕಿ ಜ್ವರವು ಕಾಣಿಸಿಕೊಂಡಿದ್ದು ಆ ರಾಜ್ಯಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ನಿಗಾ ವಹಿಸಲಾಗಿದೆ. ಕೇರಳದಿಂದ ಜೀವಂತ ಕೋಳಿ ಹಾಗೂ ಅವುಗಳ ಉತ್ಪನ್ನವನ್ನು ಜಿಲ್ಲೆಗೆ ತರುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.