ADVERTISEMENT

ಕೊನೆಗೂ ಉದ್ಯೋಗ ನಷ್ಟ ಒಪ್ಪಿದ ಬಿಜೆಪಿ ಸರ್ಕಾರ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 7:47 IST
Last Updated 28 ಸೆಪ್ಟೆಂಬರ್ 2021, 7:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉದ್ಯೋಗ ನಷ್ಟವಾಗಿರುವ ಬಗ್ಗೆ ವಾಸ್ತವ ಮರೆಮಾಚಿದ್ದ ಕೇಂದ್ರದ ಬಿಜೆಪಿ ಸರ್ಕಾರ ಕೊನೆಗೂ ಅನಿವಾರ್ಯವಾಗಿ ಸತ್ಯವನ್ನು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕೋವಿಡ್ ಮೊದಲನೇ ಅಲೆಯಿಂದ ಲಾಕ್‌ಡೌನ್‌ ಹೇರಿದ್ದ ಮಾರ್ಚ್–ಜೂನ್ ಅವಧಿಯಲ್ಲಿ ದೇಶದ 9 ಪ್ರಮುಖ ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆ ಸೋಮವಾರ ತಿಳಿಸಿತ್ತು.

ಈ ಕುರಿತ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ವಾಸ್ತವ ಮರೆಮಾಚಿ ಅಂಕಿ ಅಂಶಗಳನ್ನು ನೀಡಿದ್ದರೂ ಬಿಜೆಪಿ ಸರ್ಕಾರವು ಉದ್ಯೋಗ ನಷ್ಟವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದೆ. ಸರ್ಕಾರದ ಪ್ರಕಾರ, ಕೇವಲ 3 ತಿಂಗಳಲ್ಲಿ 23 ಲಕ್ಷ ಉದ್ಯೋಗ ನಷ್ಟವಾಗಿದ್ದು ಆತಂಕಕಾರಿ ಸಂಗತಿ. ‘ಪಕೋಡಾನಾಮಿಕ್ಸ್’ ಸೂತ್ರದ ಬಿಜೆಪಿ ಸರ್ಕಾರದಿಂದ ಜನತೆಗೆ ಮತ್ತೊಮ್ಮೆ ಉದ್ಯೋಗ ಸಿಗಬಹುದಾದ ಯಾವ ನಿರೀಕ್ಷೆಯೂ ಇಲ್ಲ’ ಎಂದು ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.