ADVERTISEMENT

ಐಫೋನ್‌ ತಯಾರಿಕೆಗೆ ಭೂಮಿ: ನಮ್ಮ ಸರ್ಕಾರವೇ ಬರಬೇಕಾಯ್ತು ಎಂದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2023, 16:21 IST
Last Updated 1 ಜೂನ್ 2023, 16:21 IST
FILE PHOTO: The logo of Foxconn is seen the company's building in Taipei, Taiwan, Nov. 10, 2022. REUTERS/Ann Wang/File Photo
FILE PHOTO: The logo of Foxconn is seen the company's building in Taipei, Taiwan, Nov. 10, 2022. REUTERS/Ann Wang/File Photo   

ಬೆಂಗಳೂರು: ಹಿಂದೆ ನಮ್ಮ ಅವಧಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲು ಮತ್ತೆ ನಮ್ಮ ಸರ್ಕಾರವೇ ಬರಬೇಕಾಯ್ತು ಎಂದು ಕಾಂಗ್ರೆಸ್ ಹೇಳಿದೆ.

ಫಾಕ್ಸ್‌ಕಾನ್‌ಗೆ ಭೂಮಿ ನೀಡುವ ಸಂಬಂಧ ‘ಪ್ರಜಾವಾಣಿ‘ಯ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಹೀಗೆ ಟ್ವೀಟ್‌ ಮಾಡಿದೆ.

‘ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಲು ಮತ್ತೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯ್ತು. ಫಾಕ್ಸ್‌ಕಾನ್ ಸಂಸ್ಥೆಯ ಐಫೋನ್ ತಯಾರಿಕಾ ಘಟಕಕ್ಕೆ ಭೂಮಿ ಒದಗಿಸಿ ಬಂಡವಾಳ ಹೂಡಿಕೆಗೆ ಒತ್ತು ನೀಡಲು ಸಜ್ಜಾಗಿದೆ ನಮ್ಮ ಸರ್ಕಾರ.ಇದರಿಂದ

ADVERTISEMENT

50,000 ಉದ್ಯೋಗ ಸೃಷ್ಟಿ, ವಾರ್ಷಿಕ 20 ಮಿಲಿಯನ್ ಐಫೋನ್ ತಯಾರಿಕೆ,1,7 ಬಿಲಿಯನ್ ಬಂಡವಾಳ ಹೂಡಿಕೆ ಆಗಲಿದೆ’ ಎಂದು ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.