ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್
ಬೆಂಗಳೂರು: ಪ್ರಜಾವಾಣಿ ‘ಒಳನೋಟ’ದಲ್ಲಿ ಇಂದು ಪ್ರಕಟವಾಗಿದ್ದ ‘ಸೋರುವ ಕೊಠಡಿಯಲ್ಲೇ ಕಲಿಕೆ’ ವರದಿಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಶಿಕ್ಷಣ ಇಲಾಖೆ ಅಧೋಗತಿ ತಲುಪಿದ್ದು, ರಾಜ್ಯಾದ್ಯಂತ 21,255 ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೊಂಡು, ಕುಸಿಯಲು ಕ್ಷಣಗಣನೇ ಎಣಿಸುತ್ತಿವೆ ಎಂದು ವರದಿಯನ್ನು ಸಮರ್ಥಿಸಿಕೊಂಡಿದೆ.
ಸರ್ಕಾರ ಮಲಗಿದ ಪರಿಣಾಮ ಮಳೆಗಾಲದಲ್ಲಿ ಶಾಲಾ ಕೊಠಡಿಗಳ ಪರಿಸ್ಥಿತಿ ಹೇಳತಿರದಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಡೆಗಣನೆಯಿಂದ ಮಕ್ಕಳು ಜೀವಭಯದಲ್ಲಿ ಪಾಠ ಕೇಳಬೇಕಾಗಿದೆ ಎಂದು ಆರೋಪಿಸಿದೆ.
ಸಿಎಂ ತವರು ಜಿಲ್ಲೆಯಲ್ಲಿ 1,716, ಶಿಕ್ಷಣ ಸಚಿವರ ಜಿಲ್ಲೆ ಶಿವಮೊಗ್ಗದಲ್ಲಿ 426 ಕೊಠಡಿಗಳು ದುಸ್ಥಿತಿಯಲ್ಲಿರುವುದು ದುರಂತ. ಈ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಹಿಡಿದಿರುವ ಗ್ರಹಣ, ಕನ್ನಡಿಗರಿಗೆ ಅಂಟಿರುವ ಶಾಪ. ಸಚಿವ ಮಧು ಬಂಗಾರಪ್ಪ ಅವರು ತೊಲಗುವವರೆಗೂ ಮಕ್ಕಳಿಗೆ ಭವಿಷ್ಯವಿಲ್ಲ.! ಸಿಎಂ ಸಿದ್ದರಾಮಯ್ಯನವರೇ, ಕೂಡಲೇ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.