ADVERTISEMENT

ಕೋವಿಡ್: ಮೂರೂವರೆ ತಿಂಗಳಲ್ಲಿಯೇ ಕನಿಷ್ಠ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 17:25 IST
Last Updated 2 ನವೆಂಬರ್ 2020, 17:25 IST
ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ
ಸೋಂಕು ಪತ್ತೆ ಪರೀಕ್ಷೆಯ ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 2,576 ಕೋವಿಡ್ ಪ್ರಕರಣ ಗಳು ವರದಿಯಾಗಿದ್ದು, ಸೋಂಕಿತರಲ್ಲಿ 19 ಜನ ಮೃತಪಟ್ಟಿದ್ದಾರೆ.

ಮೂರೂವರೆ ತಿಂಗಳಲ್ಲಿಯೇ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಸೋಂಕಿತರ ಹಾಗೂ ಮೃತರ ಕನಿಷ್ಠ ಸಂಖ್ಯೆ ಇದು.

ಜುಲೈ ಮೊದಲ ವಾರದಲ್ಲಿ ದಿನಕ್ಕೆ ಸುಮಾರು 1,500 ಆಸು–ಪಾಸು ಪ್ರಕರಣಗಳು ವರದಿಯಾಗಿದ್ದವು. ನ.2ರಂದು ಸೋಂಕಿತರಿಗಿಂತ ನಾಲ್ಕು ಪಟ್ಟು ಹೆಚ್ಚು ಜನ ಅಂದರೆ 8,334 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಆ ಮೂಲಕ ಸತತ 19ನೇ ದಿನವೂ ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಿದೆ. ಒಟ್ಟು 7,73,595 ಜನ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. ಈ ತಿಂಗಳ ಮೊದಲೆರಡು ವಾರ ಸೋಂಕಿತರ ಸಂಖ್ಯೆ ಬಹುತೇಕ ದಿನಗಳು 10 ಸಾವಿರಕ್ಕಿಂತ ಹೆಚ್ಚಾಗಿತ್ತು.

ADVERTISEMENT

ಕಡೆಯ ಎರಡು ವಾರಗಳಲ್ಲಿ ಇಳಿಮುಖ ಕಂಡಿದ್ದು, ಈಗ ಎರಡೂವರೆ ಸಾವಿರದ ಸಮೀಪಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.