ADVERTISEMENT

ಪಿಯು | ಖಾಲಿ ಹುದ್ದೆ ತೋರಿಸದ ಇಲಾಖೆ– ಉಪನ್ಯಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 17:08 IST
Last Updated 24 ಜೂನ್ 2025, 17:08 IST
   

ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಕೌನ್ಸೆಲಿಂಗ್‌ ಆರಂಭವಾಗಿದ್ದು, ಖಾಲಿ ಇರುವ ಹಲವು ಹುದ್ದೆಗಳನ್ನು ತೋರಿಸಿಲ್ಲ ಎಂದು ಉಪನ್ಯಾಸಕರು ದೂರಿದ್ದಾರೆ.

ಮೈಸೂರಿನ ಹೆಬ್ಬಾಳ ಬಡಾವಣೆ ಮಂಜೇಗೌಡನ ಕೊಪ್ಪಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ 83 ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್‌ ಅವರ ನಿವೃತ್ತಿಯಿಂದ 2024ರ ಅಕ್ಟೋಬರ್‌ನಿಂದ ಹುದ್ದೆ ಖಾಲಿ ಇದ್ದರೂ, ಕೌನ್ಸೆಲಿಂಗ್‌ಗಾಗಿ ಬಿಡುಗಡೆ ಮಾಡಿದ ಖಾಲಿ ಹುದ್ದೆಗಳ ಪಟ್ಟಿಯಲ್ಲಿ ತೋರಿಸಿಲ್ಲ ಎಂದು ಉಪನ್ಯಾಸಕರೊಬ್ಬರು ಆರೋಪಿಸಿದ್ದಾರೆ. 

ಬುಧವಾರ ನಡೆಯುವ ಕೌನ್ಸೆಲಿಂಗ್‌ ಮುಂದೂಡಬೇಕು, ಇಲ್ಲವೇ ಖಾಲಿ ಇರುವ ಉಪನ್ಯಾಸಕರ ಹುದ್ದೆಯನ್ನು ಪಟ್ಟಿಯಲ್ಲಿ ತೋರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ADVERTISEMENT

ತಾತ್ಕಾಲಿಕ ಪಟ್ಟಿಯಲ್ಲಿ ಹುದ್ದೆ ಖಾಲಿ ಇದೆ ಎಂದು ತೋರಿಸಲಾಗಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಮಂಜೇಗೌಡನ ಕೊಪ್ಪಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಯನ್ನು ತೋರಿಸಿಲ್ಲ. ಅಲ್ಲಿ ಹುದ್ದೆ ಖಾಲಿ ಇರುವುದನ್ನು ಕಾಲೇಜಿನ ಪ್ರಾಂಶುಪಾಲರು ದೃಢಪಡಿಸಿದ್ದಾರೆ. ಆದರೂ, ಪಿಯು ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್‌ಗೆ ಪರಿಗಣಿಸಿಲ್ಲ. ಇದರಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.