ADVERTISEMENT

‘ಪರಿಶಿಷ್ಟ ಜಾತಿಯ ಉಪ ಜಾತಿಗಳ ಪಾರದರ್ಶಕ ಸಮೀಕ್ಷೆ ನಡೆಯಲಿ’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 1:03 IST
Last Updated 26 ಏಪ್ರಿಲ್ 2025, 1:03 IST

ಬೆಂಗಳೂರು: ಪರಿಶಿಷ್ಟ ಜಾತಿಯ ಉಪ ಜಾತಿಗಳ ಜನಸಂಖ್ಯೆಯ ಬಗ್ಗೆ ‌ಅನುಮಾನಗಳಿಗೆ ಅವಕಾಶ ಇಲ್ಲದಂತೆ ಸಂಪೂರ್ಣ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು’ ಎಂದು ಕರ್ನಾಟಕ ನವ ಜಾಗೃತಿ ವೇದಿಕೆ ಆಗ್ರಹಿಸಿದೆ.

‘ವಿವರ ಭರ್ತಿ ಮಾಡಿದ ನಮೂನೆಯ ಎರಡು ಪ್ರತಿ ತಯಾರಿಸಿ, ಕುಟುಂಬದ ಒಬ್ಬ ಸದಸ್ಯ ಮತ್ತು ಗಣತಿದಾರರು ಸಹಿ ಮಾಡಬೇಕು. ಒಂದು ಪ್ರತಿ ಕುಟುಂಬಕ್ಕೆ ನೀಡಬೇಕು. ದತ್ತಾಂಶಗಳ ಮಾಹಿತಿ ಎಲ್ಲರಿಗೂ ಲಭ್ಯವಾಗುವಂತೆ ವಾರ್ಡ್‌ ಕಚೇರಿ, ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆಕ್ಷೇಪಣೆ, ತಿದ್ದುಪಡಿ ಬಳಿಕ ಅಂತಿಮ ಪಟ್ಟಿ ಪ್ರಕಟಿಸಿದರೆ ಉಪ ಜಾತಿಗಳ ನಿಖರ ಸಂಖ್ಯೆ ಸಿಗಲು ಸಾಧ್ಯ’ ಎಂದು ವೇದಿಕೆಯ ಅಧ್ಯಕ್ಷ ಅನಂತರಾಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಉಪ ಜಾತಿ ಜನಸಂಖ್ಯೆ ವಿವರ ಘೋಷಿಸಿದ ಬಳಿಕ ಪ್ರತಿಭಟನೆಗೆ ಅವಕಾಶ ವಿಲ್ಲದಂತೆ ವಸ್ತುನಿಷ್ಠ ವರದಿಯನ್ನು ನೀಡಬೇಕು’ ಎಂದೂ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.