ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕೊಲ್ಹಾಪುರಿ ಚಪ್ಪಲಿ ಮಾರಾಟ ವಂಚನೆ ಸಂಬಂಧ ಲಿಡ್ಕರ್ ಸಂಸ್ಥೆಯು ಇಟಲಿ ಮೂಲದ ಪ್ರಾಡಾ ಕಂಪನಿ ಮತ್ತು ಪ್ರಾಡಾ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ, ಅಗ್ರಿಕಲ್ಚರ್ ಸಂಸ್ಥೆಗೂ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ಕೆ.ಎಂ ತಿಳಿಸಿದ್ದಾರೆ.
ಪ್ರಾಡಾ ಕಂಪನಿಯಿಂದ ಕೊಲ್ಹಾಪುರಿ ಚಪ್ಪಲಿ ಮಾರಾಟ ವಂಚನೆ ಸಂಬಂಧ ಖಾಸಗಿಯಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸಕಾರಣ ನೀಡಿ ವಜಾ ಮಾಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಲಿಡ್ಕರ್‌ನ ಜಂಟಿ ಸಹಯೋಗದಲ್ಲಿ ಜಿಐ ಟ್ಯಾಗ್ ಹೊಂದಿರುವ ಮಹಾರಾಷ್ಟ್ರದ ಲಿಡ್‌ಕಾಮ್ ಜತೆ ವರ್ಚ್ಯುವಲ್ ಸಭೆ ಮಾಡಿ, ಹಲವು ಪತ್ರ ವ್ಯವಹಾರ ನಡೆಸಲಾಗಿದೆ. ಎರಡೂ ಸಂಸ್ಥೆಗಳು ಜತೆಯಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
‘ನಮ್ಮ ಕರ್ನಾಟಕದ ಅಸ್ಮಿತೆ ಉಳಿಸುವ ಹೋರಾಟದಲ್ಲಿ, ನಮ್ಮ ಪಾರಂಪರಿಕ ಚರ್ಮ ಕುಶಲಕರ್ಮಿಗಳ ಕೌಶಲಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈಗಾಗಲೇ ಕಾನೂನು ಹೋರಾಟದ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.