ADVERTISEMENT

ಕರ್ನಾಟಕ ಸಾಹಿತ್ಯ ಅಕಾಡೆಮಿ: ವೀರಣ್ಣ, ಸಬಿಹಾ ಸೇರಿ ಐವರಿಗೆ ‘ಗೌರವ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 7:52 IST
Last Updated 8 ಮಾರ್ಚ್ 2025, 7:52 IST
   

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ರ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಸಿ. ವೀರಣ್ಣ (ಬೆಂಗಳೂರು), ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಎ.ಎಂ. ಮದರಿ (ಕೊಪ್ಪಳ) ಹಾಗೂ ಸಬಿಹಾ ಭೂಮಿಗೌಡ (ಮಂಗಳೂರು) ಆಯ್ಕೆಯಾಗಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ‘ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಬಹುಮಾನ ಒಳಗೊಂಡಿದೆ’ ಎಂದು ತಿಳಿಸಿದರು. 

‘2023ರ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಎಂ.ಎಸ್. ಶೇಖರ್ (ಮೈಸೂರು), ಜಿ.ಎನ್. ಮೋಹನ್ (ಬೆಂಗಳೂರು), ಟಿ.ಎಸ್. ವಿವೇಕಾನಂದ (ತುಮಕೂರು), ಜಯಶ್ರೀ ಕಂಬಾರ (ಬೆಳಗಾವಿ), ಪ್ರೊ. ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ (ಧಾರವಾಡ), ಬಾಲಗುರುಮೂರ್ತಿ (ಕೋಲಾರ), ಪ್ರೊ. ಶಿವಗಂಗಾ ರುಮ್ಮಾ (ಕಲಬುರಗಿ), ರೀಟಾ ರೀನಿ (ಬೆಂಗಳೂರು), ಕಲೀಮ್ ಉಲ್ಲಾ (ಶಿವಮೊಗ್ಗ) ಹಾಗೂ ವೆಂಕಟಗಿರಿ ದಳವಾಯಿ (ಬಳ್ಳಾರಿ) ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹ 25 ಸಾವಿರ ಒಳಗೊಂಡಿದೆ’ ಎಂದರು.

ADVERTISEMENT

‘2022ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಬಹುಮಾನ ಒಳಗೊಂಡಿದೆ. 2022ರ ವಿವಿಧ ದತ್ತಿ ಬಹುಮಾನಗಳಿಗೆ ಒಂಬತ್ತು ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು

1. ಡಾ. ಸಿ. ವೀರಣ್ಣ - ಬೆಂಗಳೂರು

2. ಡಾ. ಶ್ರೀರಾಮ ಇಟ್ಟಣ್ಣವರ - ಬಾಗಲಕೋಟೆ

3. ಜಾಣಗೆರೆ ವೆಂಕಟರಾಮಯ್ಯ – ತುಮಕೂರು

4. ಎ.ಎಂ. ಮದರಿ – ಕೊಪ್ಪಳ

5. ಡಾ. ಸಬಿಹಾ ಭೂಮಿಗೌಡ – ಮಂಗಳೂರು

ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್‌ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.

10 ಮಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ 50 ರಿಂದ 60ರ ವಯೋಮಾನದ 10 ಮಂದಿ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ₹25ದು ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಮಾರ್ಚ್‌ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

2023ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು

1. ಡಾ. ಎಂ.ಎಸ್. ಶೇಖರ್ - ಮೈಸೂರು

2. ಜಿ.ಎನ್. ಮೋಹನ್ ಬೆಂಗಳೂರು

3. ಡಾ. ಟಿ.ಎಸ್. ವಿವೇಕಾನಂದ – ತುಮಕೂರು

4. ಡಾ. ಜಯಶ್ರೀ ಕಂಬಾರ – ಬೆಳಗಾವಿ

5. ಪ್ರೊ. ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ – ಧಾರವಾಡ

6. ಡಾ. ಬಾಲಗುರುಮೂರ್ತಿ - ಕೋಲಾರ

7. ಪ್ರೊ. ಶಿವಗಂಗಾ ರುಮ್ಮಾ – ಕಲಬುರಗಿ

8. ಡಾ. ರೀಟಾ ರೀನಿ - ಬೆಂಗಳೂರು

9. ಡಾ. ಕಲೀಮ್ ಉಲ್ಲಾ - ಶಿವಮೊಗ್ಗ

10. ಡಾ. ವೆಂಕಟಗಿರಿ ದಳವಾಯಿ –ಬಳ್ಳಾರಿ

2022ನೇ ವರ್ಷದ ಪುಸ್ತಕ ಬಹುಮಾನ ವಿಜೇತರು
2022ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.