ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರ ಚಿಕ್ಕಪ್ಪ ಉಮರ್ ಫಾರೂಕ್ ಹ್ಯಾರಿಸ್ ನಲಪಾಡ್ ಅವರ ಬ್ಯಾಗ್ನಲ್ಲಿ ಬಂದೂಕಿನ ಜೀವಂತ ಗುಂಡುಗಳು ಪತ್ತೆಯಾಗಿವೆ.
ಫಾರೂಕ್ ಅವರು ದುಬೈಗೆ ಹೋಗುವ ಸಲುವಾಗಿ ಮಂಗಳವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಬಳಿ ಇದ್ದ ಕ್ಯಾಬಿನ್ ಲಗೇಜ್ ಪರಿಶೀಲನೆ ವೇಳೆ ಗುಂಡುಗಳು ಪತ್ತೆಯಾಗಿವೆ. ನಿಲ್ದಾಣದ ಸಿಬ್ಬಂದಿ ಈ ವಿಚಾರವನ್ನು ಸಿಐಎಸ್ಎಫ್ ಅಧಿಕಾರಿಗಳಿಗೆ ತಿಳಿಸಿದ್ದರು. ಅವರು ಫಾರೂಕ್ ಅವರನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಿದ್ದರು.
‘ಬಟ್ಟೆಗಳನ್ನು ಬ್ಯಾಗ್ಗೆ ತುಂಬುವ ವೇಳೆಆಕಸ್ಮಿಕವಾಗಿ ಗುಂಡುಗಳು ಸೇರಿಕೊಂಡಿವೆ ಎಂದು ಫಾರೂಕ್ ತಿಳಿಸಿದ್ದಾರೆ. ತಮ್ಮ ಬಳಿ ಬಂದೂಕಿನ ಪರವಾನಗಿ ಇರುವ ವಿಚಾರವನ್ನೂ ಹೇಳಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಅವರು ಹೇಳಿರುವುದು ಸತ್ಯ ಎಂಬುದು ಮನದಟ್ಟಾಗಿದೆ. ಅವರಿಗೆ ದುಬೈಗೆ ಪ್ರಯಾಣ ಮಾಡಲು ಅನುಮತಿ ನೀಡಿ, ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.