ADVERTISEMENT

Lokayukta Raid: ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:26 IST
Last Updated 25 ನವೆಂಬರ್ 2025, 5:26 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ADVERTISEMENT

ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಯಾವ ಅಧಿಕಾರಿಗಳ ಮೇಲೆ ದಾಳಿ?

ಪುಟ್ಟಸ್ವಾಮಿ, ಎಜಿಓ, ಮಂಡ್ಯ ನಗರಸಭೆ (ಮಂಡ್ಯ)

ಪ್ರೇಮ್ ಸಿಂಗ್, ಮುಖ್ಯ ಎಂಜಿನಿಯರ್, ಕೃಷ್ಣ ಮೇಲ್ದಂಡೆ ಯೋಜನೆ (ಬೀದರ್)

ರಾಮಸ್ವಾಮಿ, ಆದಾಯ ನಿರೀಕ್ಷಕ ,ಹೂತಗಲ್ಲಿ ನಗರಸಭೆ (ಮೈಸೂರು)

ಸುಭಾಷ್ ಚಂದ್ರ, ಸಹ ಪ್ರಾಧ್ಯಾಪಕ ಕರ್ನಾಟಕ ವಿಶ್ವವಿದ್ಯಾನಿಲಯ ( ಧಾರವಾಡ)

ಸತೀಶ್, ಹಿರಿಯ ಪಶುವೈದ್ಯ ಪರೀಕ್ಷಕ, ಪ್ರಾಥಮಿಕ ಪಶುವೈದ್ಯ ಕ್ಲಿನಿಕ್, ಹೂಯಿಲಗೋಲ ( ಧಾರವಾಡ)

ಶೇಖಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್, ಯೋಜನಾ ನಿರ್ದೇಶಕರ ಕಚೇರಿ, ಹಾವೇರಿ (ದಾವಣಗೆರೆ)

ಕುಮಾರಸ್ವಾಮಿ ಪಿ, ಕಚೇರಿ ಉಪನಿರ್ವಾಹಕ, ಆರ್‌ಟಿಒ, ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು–1)

ಲಕ್ಷ್ಮಿಪತಿ ಸಿ.ಎನ್, ಎಫ್‌ಡಿಎ, ಸಿಮ್ಸ್ ಮೆಡಿಕಲ್ ಕಾಲೇಜು (ಶಿವಮೊಗ್ಗ)

ಪ್ರಭು ಜೆ, ಸಹ ನಿರ್ದೇಶಕರು, ಕೃಷಿ ಮಾರಾಟ ಘಟಕ (ದಾವಣಗೆರೆ)

ಗಿರೀಶ್ ಡಿ.ಎಂ, ಸಹಾಯಕರ ಕಾರ್ಯನಿರ್ವಾಹಕ ಎಂಜಿನಿಯರ್, ಪಿಡಬ್ಲ್ಯೂಡಿ (ಕೊಡಗು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.