ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಮಂಗಳವಾರ ಮುಂಜಾನೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಹಾಗೂ ಹಾವೇರಿ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
ಜ್ಯೋತಿ ಮೇರಿ – ಪ್ರಥಮ ದರ್ಜೆ ಸಹಾಯಕಕಿ (ಎಫ್‌ಡಿಎ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಹಾಸನ)
ಧೂಳಪ್ಪ– ಸಹಾಯಕ ನಿರ್ದೇಶಕ, ಕೃಷಿ ಇಲಾಖೆ (ಕಲಬುರಗಿ)
ಚಂದ್ರಕುಮಾರ್– ಸಹಾಯಕ ನಿರ್ದೇಶಕ, ಕೃಷಿ ಇಲಾಖೆ (ಚಿತ್ರದುರ್ಗ)
ಲಕ್ಷ್ಮೀನಾರಾಯಣ ಪಿ. ನಾಯಕ್ – ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಸಾರಿಗೆ ಇಲಾಖೆ (ಉಡುಪಿ)
ಮಂಜುನಾಥ ಜಿ. – ವೈದ್ಯಾಧಿಕಾರಿ, ಮಲ್ಲಸಂದ್ರ ಹೆರಿಗೆ ಆಸ್ಪತ್ರೆ (ಬೆಂಗಳೂರು ನಗರ)
ಜಗದೀಶ ನಾಯ್ಕ್– ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ), ಕೆಆರ್‌ಐಡಿಎಲ್ (ದಾವಣಗೆರೆ)
ಅಶೋಕ – ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ (ವಿಎಒ), ರಾಣೇಬೆನ್ನೂರು (ಹಾವೇರಿ)
ಬಸವೇಶ್ – ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಸವಣೂರು (ಹಾವೇರಿ)
ಚೇತನ್– ಕಿರಿಯ ಇಂಜಿನಿಯರ್, ಆಲಮಟ್ಟಿ ಬಲದಂಡೆ ಕಾಲುವೆ ಕಚೇರಿ, (ಬಾಗಲಕೋಟೆ)
ವಿ. ಸುಮಂಗಳಾ– ನಿರ್ದೇಶಕಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಬೆಂಗಳೂರು ನಗರ)
ಬಿ.ಎಸ್. ನಡುವಿನಮನಿ – ಕಿರಿಯ ಇಂಜಿನಿಯರ್, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ದಾವಣಗೆರೆ)
ಎನ್. ಕೆ. ಗಂಗಾಮರಿ ಗೌಡ– ಮೋಜಣಿದಾರ, ವಿಶೇಷ ಭೂಸ್ವಾಧೀನ ಕಚೇರಿ-2, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.