
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಮೂವರು ಈ ಬಾರಿ ಲೋಕಸಭೆಗೆ ‘ಬಡ್ತಿ’ ಪಡೆದು, ಸಚಿವರಾಗುವ ಕನಸಿನಲ್ಲಿದ್ದಾರೆ.
ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ, ವಿರೋಧ ಪಕ್ಷದ ನಾಯಕ, ಸಚಿವರಾಗಿ ಕೆಲಸ ಮಾಡಿರುವ ಜಗದೀಶ ಶೆಟ್ಟರ್, ಬಿಜೆಯಿಂದ ವಿಧಾನಸಭೆ– ಕಾಂಗ್ರೆಸ್‌ನಿಂದ ಪರಿಷತ್ತನ್ನು ಪ್ರತಿನಿಧಿಸಿದವರು. ಈಗ ಲೋಕಸಭೆಯತ್ತ ಚಿತ್ತ ನೆಟ್ಟಿದ್ದಾರೆ.
ಸಚಿವ ಸ್ಥಾನದ ಅನುಭವವೇ ಇಲ್ಲದೇ ಎರಡು ಬಾರಿ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ, ಲೋಕಸಭೆ ಸದಸ್ಯರೂ ಆಗಿದ್ದರು. ಲೋಕಸಭೆಯ ಕನಸಿನೊಂದಿಗೆ ಈ ಬಾರಿ ಮಂಡ್ಯದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮುಖ್ಯಮಂತ್ರಿ, ಸಚಿವರಾಗಿ ಕಾರ್ಯನಿರ್ವಹಿಸಿದ ಬಸವರಾಜ ಬೊಮ್ಮಾಯಿ, ಮೊದಲ ಬಾರಿಗೆ ದೆಹಲಿಯತ್ತ ಮುಖ ಮಾಡಿದ್ದಾರೆ. ಜೆಡಿಯುನಿಂದ ಪರಿಷತ್, ಬಿಜೆಪಿಯಿಂದ ವಿಧಾನಸಭೆ ಪ್ರವೇಶಿಸಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.