ADVERTISEMENT

LS Exit Poll 2024: ಸಂಜೆ 6 ಗಂಟೆಗೆ ಮತಗಟ್ಟೆ ಸಮೀಕ್ಷೆಯತ್ತ ಜನರ ಚಿತ್ತ

ಏಜೆನ್ಸೀಸ್
Published 1 ಜೂನ್ 2024, 6:46 IST
Last Updated 1 ಜೂನ್ 2024, 6:46 IST
<div class="paragraphs"><p>LS Exit Poll 2024</p></div>

LS Exit Poll 2024

   

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು ಜನರ ಚಿತ್ತ ಮತಗಟ್ಟೆ ಸಮೀಕ್ಷೆಯತ್ತ ನೆಟ್ಟಿದೆ.

ಮತದಾನ ಮುಕ್ತಾಯವಾದ ಕೂಡಲೇ ಮಾಧ್ಯಮ ಹಾಗೂ ಇತರೆ ಸಂಸ್ಥೆಗಳು ತಾವು ನಡೆಸಿರುವ ಮತಗಟ್ಟೆ ಸಮೀಕ್ಷೆಯನ್ನು ಬಿತ್ತರ ಮಾಡಲಿವೆ. 

ADVERTISEMENT

ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಮಾಧ್ಯಮಗಳು ಜೂನ್‌ 1ರ ಸಂಜೆ 6.30ರ ಬಳಿಕ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಬಹುದಾಗಿದೆ.

ಲೋಕಸಭಾ ಚುನಾವಣೆಗೆ ಏಳ ಹಂತಗಳಲ್ಲಿ ಮತದಾನ ನಡೆಯಿತು. ಅಂತಿಮ ಹಂತದಲ್ಲಿ ದೇಶದ 57 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26, ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.