ADVERTISEMENT

ಚರ್ಮ ಗಂಟು ರೋಗ| ಪರಿಹಾರಕ್ಕೆ ₹ 2 ಕೋಟಿ ಅನುದಾನ: ಸಚಿವ ಪ್ರಭು ಚವ್ಹಾಣ್‌

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 16:28 IST
Last Updated 2 ಅಕ್ಟೋಬರ್ 2022, 16:28 IST
ಸಚಿವ ಪ್ರಭು ಚವ್ಹಾಣ್‌
ಸಚಿವ ಪ್ರಭು ಚವ್ಹಾಣ್‌   

ಬೆಂಗಳೂರು: ಚರ್ಮ ಗಂಟು ರೋಗದಿಂದ ಮೃತಪಡುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲು ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

‘ಆಗಸ್ಟ್‌ 1ರಿಂದ ಈಚೆಗೆ ಚರ್ಮ ಗಂಟು ರೋಗದಿಂದ ಮೃತಪಟ್ಟಿರುವ ಪ್ರತಿ ರಾಸುಗಳಿಗೆ ತಲಾ ₹ 20,000, ಎತ್ತುಗಳಿಗೆ ತಲಾ ₹ 30,000 ಮತ್ತು ಕರುಗಳಿಗೆ ತಲಾ ₹ 5,000 ಪರಿಹಾರ ನೀಡಲಾಗುವುದು. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಈವರೆಗೆ 23,784 ರಾಸುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿರುವುದು ವರದಿಯಾಗಿದೆ. 11,494 ರಾಸುಗಳು ಚೇತರಿಸಿಕೊಂಡಿವೆ. 680 ಜಾನುವಾರುಗಳು ಮೃತಪಟ್ಟಿವೆ. ಉಳಿದ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. 2.65 ಲಕ್ಷ ಜಾನುವಾರುಗಳಿಗೆ ಈವರೆಗೆ ಲಸಿಕೆ ನೀಡಲಾಗಿದೆ. ಈಗ 3.42 ಲಕ್ಷ ಡೋಸ್‌ ಲಸಿಕೆ ಲಭ್ಯವಿದ್ದು, ಇದೇ ವಾರ 35,000 ಡೋಸ್‌ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.