ADVERTISEMENT

ಅಂಗಾಂಗ ದಾನದ ಕುರಿತು ಎಲ್ಲ ವಿ.ವಿಗಳು ಜಾಗೃತಿ ಮೂಡಿಸಬೇಕು: ಮಹಾರಾಷ್ಟ್ರ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 5:56 IST
Last Updated 13 ಆಗಸ್ಟ್ 2020, 5:56 IST
Bhagat Singh Koshyari
Bhagat Singh Koshyari   

ಮುಂಬೈ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಅಂಗಾಂಗ ದಾನದ ಸಪ್ತಾಹ ಆಚರಿಸಬೇಕು ಎಂದು ಕರೆ ನೀಡಿರುವ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು, ಈ ಮೂಲಕ ವಿಶ್ವವಿದ್ಯಾಲಯಗಳು ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.

ವಿಶ್ವ ಅಂಗಾಂಗ ದಾನ ದಿನವಾದ ಗುರುವಾರದಿಂದಲೇ (ಆಗಸ್ಟ್‌ 13) ಸಪ್ತಾಹ ಆಚರಿಸುವಂತೆ ವಿ.ವಿಗಳಿಗೆ ಅವರು ತಿಳಿಸಿದ್ದಾರೆ.

‘ಆಗಸ್ಟ್‌ 13ರಿಂದ 20ರವರೆಗೆ ಈ ಕುರಿತು ಸಪ್ತಾಹ ಆಚರಿಸಬೇಕು. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಂಗಾಂಗ ದಾನದ ಅಗತ್ಯತೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ರಾಜ್ಯಪಾಲರು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.

ADVERTISEMENT

ರಾಜ್ಯಪಾಲರ ಸೂಚನೆ ಮೇರೆಗೆ ಮಹಾರಾಷ್ಟ್ರದ ಹಲವು ವಿಶ್ವವಿದ್ಯಾಲಯಗಳು ಗುರುವಾರದಿಂದ ಅಂಗಾಂಗ ದಾನದ ಸಪ್ತಾಹ ಹಮ್ಮಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.