ADVERTISEMENT

ಕಸಾಪ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಮಹೇಶ ಜೋಶಿ ಗೈರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 13:48 IST
Last Updated 24 ಆಗಸ್ಟ್ 2025, 13:48 IST
   

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಗೈರಾಗಿದ್ದರು. ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. 

ಸಮ್ಮೇಳನಕ್ಕೆ ಬಿಡುಗಡೆಯಾದ ₹30 ಕೋಟಿ ಅನುದಾನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ₹2.50 ಕೋಟಿ ನೀಡಲಾಗಿತ್ತು. ಇದರ ಖರ್ಚು–ವೆಚ್ಚದ ಲೆಕ್ಕವನ್ನು ಇದುವರೆಗೆ ಜೋಶಿಯವರು ಕೊಡದ ಹಿನ್ನೆಲೆಯಲ್ಲಿ, ಕಾರ್ಯಕ್ರಮಕ್ಕೆ ಬಂದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಎಚ್ಚರಿಕೆ ನೀಡಿದ್ದರು. 

ಸಾಹಿತ್ಯ ಸಮ್ಮೇಳನದ ಮುಗಿದು 8 ತಿಂಗಳಾದರೂ ಮಹೇಶ ಜೋಶಿ ಅವರು ಮಂಡ್ಯಕ್ಕೆ ಒಮ್ಮೆಯೂ ಕಾಲಿಟ್ಟಿಲ್ಲ. ಏಪ್ರಿಲ್‌ನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು–ವೆಚ್ಚಗಳ ವಿವರ ನೀಡುವ ಸಚಿವರ ಪತ್ರಿಕಾಗೋಷ್ಠಿಗೂ ಅವರು ಬಂದಿರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.