
ಮಳವಳ್ಳಿ (ಮಂಡ್ಯ ಜಿಲ್ಲೆ): ‘ಬಾಕಿ ಉಳಿಸಿಕೊಂಡಿರುವ ₹55 ಲಕ್ಷ ತೆರಿಗೆ ಪಾವತಿಸಬೇಕು’ ಎಂದು ಒತ್ತಾಯಿಸಿ ಪಟ್ಟಣದ ರೋಟರಿ ವಿದ್ಯಾಸಂಸ್ಥೆ ಮುಂಭಾಗ ಪುರಸಭೆ ಅಧಿಕಾರಿ ಎಂ.ಸಿ. ನಾಗರತ್ನ ಹಾಗೂ ಸಿಬ್ಬಂದಿ ಶನಿವಾರ ಧರಣಿ ನಡೆಸಿದರು.
‘12 ವರ್ಷಗಳಿಂದ ಕಟ್ಟಡ ಶುಲ್ಕ ಪಾವತಿಸಿಲ್ಲ. ಇದುವರೆಗೂ ₹8 ಲಕ್ಷ ತೆರಿಗೆಯನ್ನಷ್ಟೇ ಪಾವತಿಸ ಲಾಗಿದೆ. ಬಾಕಿ ತೆರಿಗೆ ಕಟ್ಟುವಂತೆ ಹಲವು ನೋಟಿಸ್ ನೀಡಿದ್ದರೂ, ಸಂಸ್ಥೆ ನಿರ್ಲಕ್ಷ್ಯ ತೋರಿದೆ’ ಎಂದು ಮುಖ್ಯಾಧಿಕಾರಿ ತಿಳಿಸಿದರು.
‘ತೆರಿಗೆ ಪಾವತಿಸುವಂತೆ ಸೂಚಿಸಲು ಸಿಬ್ಬಂದಿ ಶಾಲೆಗೆ ತೆರಳಿದಾಗ ಸಂಸ್ಥೆಯಿಂದ ಸಮರ್ಪಕ ಉತ್ತರ ಬಂದಿಲ್ಲ. ಸಿಬ್ಬಂದಿಗೆ ಸಂಬಳ ನೀಡಲು ಆಗಿಲ್ಲ. ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗೆ ಬೀಗ ಹಾಕದೇ ತೆರಿಗೆ ಕಟ್ಟುವಂತೆ ಆಗ್ರಹಿಸಲಾಗುತ್ತಿದೆ’ ಎಂದರು.
‘ಸಂಸ್ಥೆಗೆ ನೋಟಿಸ್ ಬಂದಿಲ್ಲ, ಬಂದಿದ್ದರೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಅಧ್ಯಕ್ಷ ಹಬಿ ಉಲ್ಲಾ ಖಾನ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.