ADVERTISEMENT

ಅರ್ಹರಿದ್ದರೆ ಬ್ರಾಹ್ಮಣರು ಸಿ.ಎಂ ಆಗಲು ಅಡ್ಡಿಯಿಲ್ಲ: ಸುಬುಧೇಂದ್ರತೀರ್ಥ ಸ್ವಾಮೀಜಿ

ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:28 IST
Last Updated 7 ಫೆಬ್ರುವರಿ 2023, 21:28 IST
ಸುಬುಧೇಂದ್ರತೀರ್ಥ ಸ್ವಾಮೀಜಿ
ಸುಬುಧೇಂದ್ರತೀರ್ಥ ಸ್ವಾಮೀಜಿ   

ಬಾಗಲಕೋಟೆ: ‘ಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಮುಖ್ಯಮಂತ್ರಿಯಾಗಲು ಯಾವುದೇ ಅಡ್ಡಿಯಿಲ್ಲ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಮಂಗಳವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ,‘ಬ್ರಾಹ್ಮಣರು ಬೇರೆ ಸಮಾಜದ ವಿರೋಧಿಯಲ್ಲ. ಎಲ್ಲರ ಕ್ಷೇಮ ಕೋರುವ ಸಮಾಜ’ ಎಂದು ಹೇಳಿದರು.

‘ಬ್ರಾಹ್ಮಣ ಸಮುದಾಯವನ್ನು ಯಾರೇ ನಿಂದಿಸಿದರೂ ಖಂಡಿಸುತ್ತೇವೆ. ಯಾರೂ, ಯಾವ ಸಮುದಾಯವನ್ನೂ ತೆಗಳಬಾರದು. ಒಂದು ಸಮುದಾಯದವರು ಯಾವುದೇ ಮುಖ್ಯ ಪದವಿ ಅಲಂಕರಿಸಬಾರದು ಎಂಬ ಹೇಳಿಕೆ ಸಂವಿಧಾನ ವಿರೋಧಿ. ಅದು ಪ್ರಜಾಪ್ರಭುತ್ವ ಆಗಲ್ಲ;ನಿರಂಕುಶ ಪ್ರಭುತ್ವ’ ಎಂದರು.

ADVERTISEMENT

‘ಹಿಂದುತ್ವ ವಿರೋಧಿಸುವುದು ಅರ್ಥಹೀನ. ಸಿದ್ದರಾಮಯ್ಯ ಅವರು ತಾವು ಹಿಂದೂ ಎನ್ನುತ್ತಾರೆ. ಆದರೆ, ಹಿಂದುತ್ವ ಒಪ್ಪುವುದಿಲ್ಲ. ತಾಯಿ ಅನ್ನೋದು, ನಂತರ ಟೀಕಿಸುವುದು ಅಪಹಾಸ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.