ADVERTISEMENT

ತುಳಜಾಭವಾನಿ ದರ್ಶನಕ್ಕೆ ಸಚಿವರ ಸೈಕಲ್‌ ಯಾತ್ರೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:29 IST
Last Updated 21 ಅಕ್ಟೋಬರ್ 2018, 19:29 IST
ಬೀದರ್‌ನಲ್ಲಿ ಭಾನುವಾರ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತುಳಜಾಪುರದ ಅಂಬಾ ಭವಾನಿದೇವಿ ದರ್ಶನ ಪಡೆಯಲು ಸೈಕಲ್‌ ಮೇಲೆ ತೆರಳಿದರು
ಬೀದರ್‌ನಲ್ಲಿ ಭಾನುವಾರ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತುಳಜಾಪುರದ ಅಂಬಾ ಭವಾನಿದೇವಿ ದರ್ಶನ ಪಡೆಯಲು ಸೈಕಲ್‌ ಮೇಲೆ ತೆರಳಿದರು   

ಬೀದರ್: ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಪ್ರಯುಕ್ತ ಹರಕೆ ತೀರಿಸಲು ಮಹಾರಾಷ್ಟ್ರದ ತುಳಜಾಪುರದಲ್ಲಿರುವ ತುಳಜಾಭವಾನಿ ದರ್ಶನ ಪಡೆಯಲು ಭಾನುವಾರ ಸೈಕಲ್‌ ಯಾತ್ರೆ ಆರಂಭಿಸಿದರು.

ಸಚಿವರು ಬೆಳಿಗ್ಗೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೊಸ ಸೈಕಲ್‌ ಏರಿ ಯಾತ್ರೆ ಶುರು ಮಾಡಿದರು. ಕುಟುಂಬದ ಸದಸ್ಯರು ಬಂಡೆಪ್ಪ ಅವರ ಹಣೆಗೆ ಕುಂಕುಮ ತಿಲಕವಿಟ್ಟು, ಆರತಿ ಬೆಳಗಿದರು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಗುಲಾಬಿ
ಮಾಲೆಗಳನ್ನು ಹಾಕಿ ಶುಭ ಕೋರಿದರು.

2004 ಹಾಗೂ 2008ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಸಂದರ್ಭದಲ್ಲಿ ಸೈಕಲ್‌ ಮೇಲೆ ತುಳಜಾಪುರಕ್ಕೆ ತೆರಳಿದ್ದರು. 2018ರ ಚುನಾವಣೆಯಲ್ಲೂ ಜಯ ಸಾಧಿಸಿದ್ದರಿಂದ ಮೂರನೇ ಬಾರಿಗೆ ತುಳಜಾಪುರಕ್ಕೆ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.