ಬೆಂಗಳೂರು: ಸರ್ಕಾರಿ ನೌಕರರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇತರ ನಿಗಮಗಳ ಸಿಬ್ಬಂದಿಗೆ ಮೇ ತಿಂಗಳ ಸಂಬಳ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
‘ಮೇ ತಿಂಗಳ ವೇತನ ಪೂರ್ತಿ ಸಿಗುತ್ತದೆ. ನೌಕರರು ಆತಂಕಕ್ಕೆ ಒಳಗಾಗುವ ಅಗತ್ಯವೇ ಇಲ್ಲ’ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
‘ವಾಯವ್ಯ ಸಾರಿಗೆ ನಿಗಮದಲ್ಲಿ ಪೂರ್ತಿ ಸಂಬಳ ಕೊಡಲಾಗುತ್ತದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸ್ಪಷ್ಟಪಡಿಸಿದ್ದಾರೆ. ಈಶಾನ್ಯ ಸಾರಿಗೆ ನಿಗಮವೂ ಸಂಬಳ ಕಡಿತ ಮಾಡುವ ಯೋಚನೆ ಮಾಡಿಲ್ಲ, ‘ಶಿಕ್ಷಕರಿಗೆ ಮೇ ತಿಂಗಳ ಸಂಬಳ ಮೂರ್ನಾಲ್ಕು ದಿನ ವಿಳಂಬವಾಗಿ ಇದೇ 10ರೊಳಗೆ ಕೈಸೇರಬಹುದು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.