ADVERTISEMENT

ವೈದ್ಯಕೀಯ | ನ.9 ರಂದು 133 ಸೀಟು ಹಂಚಿಕೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 16:36 IST
Last Updated 3 ನವೆಂಬರ್ 2023, 16:36 IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ   

ಬೆಂಗಳೂರು: ಬಾಕಿ ಇರುವ 133 ವೈದ್ಯಕೀಯ ಸೀಟುಗಳು ಮತ್ತು ದಂತ ವೈದ್ಯಕೀಯ ಸೀಟುಗಳನ್ನು ‘ಸ್ಟ್ರೇ ವೇಕೆನ್ಸಿ ರೌಂಡ್‌’ ಮೂಲಕ ನ.9 ರಂದು ಆನ್‌ಲೈನ್‌ನಲ್ಲೇ ಹಂಚಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಸೀಟು ಹಂಚಿಕೆಯಲ್ಲಿ ದಂತ ವೈದ್ಯಕೀಯ, ಆಯುಷ್‌ ಮತ್ತು ಎಂಜಿನಿಯರಿಂಗ್‌ ಸೀಟು ಪಡೆದುಕೊಂಡರೂ ಭಾಗವಹಿಸಬಹುದು. ಈ ವಿಶೇಷ ಸುತ್ತಿನಲ್ಲಿ ಸೀಟು ದೊರೆತರೆ ಅಂಥವರಿಗೆ ಹಿಂದಿನ ಸುತ್ತುಗಳಲ್ಲಿ ಹಂಚಿಕೆಯಾದ ಸೀಟುಗಳು ರದ್ದಾಗುತ್ತವೆ. ಅವುಗಳಿಗೆ ಪಾವತಿಸಿರುವ ಶುಲ್ಕವನ್ನೂ ಹಿಂದಿರುಗಿಸಲಾಗುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಮಾಹಿತಿ ನೀಡಿದ್ದಾರೆ.

ಆಸಕ್ತ ಅಭ್ಯರ್ಥಿಗಳು ನ.7 ರ ಬೆಳಿಗ್ಗೆ 10 ರಿಂದ ನ.8 ರ ಮಧ್ಯಾಹ್ನ 2 ರ ಒಳಗೆ ನಿಗದಿತ ಮೊತ್ತದ ಡಿಡಿ, ವೆರಿಫಿಕೇಶನ್ ಸ್ಲಿಪ್ ಮತ್ತು ಮೂಲ ದಾಖಲಾತಿಗಳೊಂದಿಗೆ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು. ಬಳಿಕ, ‘ಆಪ್ಷನ್ಸ್’ ದಾಖಲಿಸಲು ಪೋರ್ಟಲ್‌ ತೆರೆಯಲಾಗುವುದು. ನ.9 ರ ಬೆಳಿಗ್ಗೆ 9 ರವರೆಗೂ ಅವಕಾಶ ಕಲ್ಪಿಸಲಾಗುವುದು. ದಂತ ವೈದ್ಯಕೀಯ ಸೀಟುಗಳ ಹಂಚಿಕೆ ಪ್ರಕ್ರಿಯೆ ನ.10 ರಂದು ನಡೆಯಲಿದೆ ಎಂದಿದ್ದಾರೆ. ಮಾಹಿತಿಗೆ ಪ್ರಾಧಿಕಾರದ ಜಾಲತಾಣ http://kea.kar.nic.in ನೋಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.