ಕೊಪ್ಪಳ: ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯ ಶಂಕರ್ ಅವರು ಶನಿವಾರ ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು.
ಮೊದಲು ಗದ್ದುಗೆಯ ದರ್ಶನ ಪಡೆದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಮೇಘಾಲಯ ರಾಜಭವನದ ಸಂಕೇತ ಇರುವ ಉಡುಗೊರೆ ಹಾಗೂ ರೇಷ್ಮೆ ಶಾಲು ಸ್ವಾಮೀಜಿಗೆ ಉಡುಗೊರೆಯಾಗಿ ನೀಡಿದರು. ಪ್ರತಿಯಾಗಿ ಸ್ವಾಮೀಜಿ ಮಠದ ಗದ್ದುಗೆಯ ಭಾವಚಿತ್ರ ನೀಡಿದರು.
ಮೇಘಾಲಯದ ವಾತಾವರಣ, ಅಲ್ಲಿನ ಸ್ಥಿತಿಗತಿ, ಬೆಳವಣಿಗೆಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಸ್ವಾಮೀಜಿ ರಾಜ್ಯಪಾಲರಿಂದ ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.