ADVERTISEMENT

ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಕೇಂದ್ರವಲ್ಲ: DCM

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 12:46 IST
Last Updated 9 ಫೆಬ್ರುವರಿ 2026, 12:46 IST
<div class="paragraphs"><p>ಡಿ.ಕೆ ಶಿವಕುಮಾರ್ ಹಾಗೂ ಮೆಟ್ರೊ</p></div>

ಡಿ.ಕೆ ಶಿವಕುಮಾರ್ ಹಾಗೂ ಮೆಟ್ರೊ

   

– ಪ್ರಜಾವಾಣಿ ಚಿತ್ರಗಳು

ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಸರ್ಕಾರದ ‍‍ಪಾತ್ರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ADVERTISEMENT

ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ, ಗ್ರಾಹಕ ಬೆಲೆ ಸೂಚ್ಯಂಕದನ್ವಯ ಈಗಿರುವ ದರ, ಇಂಧನ ವೆಚ್ಚ ಮುಂತಾವುಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಎಂಆರ್‌ಸಿಎಲ್‌ ದರ ಏರಿಕೆ ಮಾಡುತ್ತದೆ. ಪರಿಷ್ಕೃತ ದರದೊಂದಿಗೆ ಬನ್ನಿ ಎಂದು ನಾನು ಅವರಿಗೆ ಸೂಚಿಸಿದ್ದೇನೆ’ ಎಂದು ಅವರು ಹೇಳಿದರು.

‘ದೆಹಲಿಯಲ್ಲಿ ಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅದರ ವೆಚ್ಚ ಅಧಿಕ. ಹೀಗಾಗಿ ದರವನ್ನು ಮತ್ತೊಮ್ಮೆ ಲೆಕ್ಕ ಹಾಕಿ ಎಂದು ತಿಳಿಸಿದ್ದೇನೆ’ ಎಂದರು.

‘ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ. ನಿಯಮಗಳ ಅನ್ವಯ ದರ ನಿಗದಿ ಸಮಿತಿ ಎಲ್ಲಾ ಖರ್ಚು ಹಾಗೂ ಇತರ ವಿಷಯಗಳನ್ನು ಪರಿಗಣಿಸಿ ದರ ಏರಿಕೆ ಮಾಡುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.