ADVERTISEMENT

ಬಿಸಿಯೂಟ ತಯಾರಕರಿಗೆ ₹40 ಸಾವಿರ ಇಡುಗಂಟು: ಶಿಕ್ಷಣ ಇಲಾಖೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2025, 23:30 IST
Last Updated 1 ಜನವರಿ 2025, 23:30 IST
ಶಾಲೆಯೊಂದರಲ್ಲಿ ಬಿಸಿಯೂಟ ತಯಾರಿಕೆ
ಶಾಲೆಯೊಂದರಲ್ಲಿ ಬಿಸಿಯೂಟ ತಯಾರಿಕೆ   

ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆಯವರು ಮತ್ತು ಸಹಾಯಕಿಯರಿಗೆ 60 ವರ್ಷಗಳಾದ ಬಳಿಕ, ₹40 ಸಾವಿರ ಇಡುಗಂಟು ನೀಡಲು ಶಾಲಾ ಶಿಕ್ಷಣ ಇಲಾಖೆ ಸಮ್ಮತಿಸಿದೆ.

ಕನಿಷ್ಠ 15 ವರ್ಷ ಕೆಲಸ ಮಾಡಿ 60 ವರ್ಷಕ್ಕೆ ನಿವೃತ್ತಿ ಹೊಂದುವವರಿಗೆ ₹40 ಸಾವಿರ ನಗದು ದೊರಕಲಿದೆ. ಐದು ವರ್ಷದಿಂದ 15 ವರ್ಷದ ಒಳಗೆ ಕೆಲಸ ಮಾಡಿದ್ದರೆ ಅಂಥವರಿಗೆ ₹30 ಸಾವಿರ ಸಿಗಲಿದೆ.

ರಾಜ್ಯದಲ್ಲಿ 1.19 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಹಾರ ತಯಾರಿಸುವುದು, ಮಕ್ಕಳಿಗೆ ಬಡಿಸುವುದು, ಪಾತ್ರೆ ತೊಳೆಯುವುದು, ಸಹಾಯಕರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ 2022ರಂದು ಅಥವಾ ನಂತರ ನಿವೃತ್ತರಾದವರಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.