ADVERTISEMENT

ಕೆಸರುಗದ್ದೆಯಲ್ಲಿ ಬಿದ್ದು, ಎದ್ದು ಓಡಿದ ಸಚಿವ ರವಿ

ಚಿಕ್ಕಮಗಳೂರು ಹಬ್ಬ ಅಂಗವಾಗಿ ಕ್ರೀಡೋತ್ಸವ ಆಯೋಜನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 20:13 IST
Last Updated 23 ಫೆಬ್ರುವರಿ 2020, 20:13 IST
ಚಿಕ್ಕಮಗಳೂರಿನ ನಲ್ಲೂರು ಗೇಟ್‌ ಬಳಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಓಟದಲ್ಲಿ ಸಚಿವ ಸಿ.ಟಿ.ರವಿ ಓಡಿದ ಪರಿ.– ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನ ನಲ್ಲೂರು ಗೇಟ್‌ ಬಳಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಓಟದಲ್ಲಿ ಸಚಿವ ಸಿ.ಟಿ.ರವಿ ಓಡಿದ ಪರಿ.– ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ಯುವಜನ ಸಬಲೀಕರಣ–ಕ್ರೀಡಾ ಸಚಿವ ಸಿ.ಟಿ.ರವಿ ಅವರು ಕೆಸರು ಗದ್ದೆ ಓಟ ಸ್ಪರ್ಧೆಯಲ್ಲಿ, ಬಿದ್ದು ಎದ್ದು ಓಡಿ ಗಮ್ಯ ತಲುಪಿದ ಪರಿ ಗಮನ ಸೆಳೆಯಿತು.

ಚಿಕ್ಕಮಗಳೂರು ಹಬ್ಬ (ಜಿಲ್ಲಾ ಉತ್ಸವ) ಅಂಗವಾಗಿ ಆಯೋಜಿಸಿರುವ ಕ್ರೀಡೋತ್ಸವದ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಸಚಿವ ರವಿ ರಾಜಕಾರಣಿಗಳ ವಿಭಾಗದಲ್ಲಿ ಭಾಗವಹಿಸಿದ್ದರು. ಬರ್ಮುಡಾ ಚಡ್ಡಿ, ಟಿ ಶರ್ಟ್‌ ಧರಿಸಿ ಗದ್ದೆಗಿಳಿದ ರವಿ ಸ್ಪರ್ಧಿಗಳೊಂದಿಗೆ ಬಿರುಸಾಗಿ ಓಡಿದರು.

ಆರಂಭದಲ್ಲಿ ವೇಗ ಕಾಪಾಡಿಕೊಂಡು ಮುಂದಿದ್ದ ರವಿ ಅವರು ಗಮ್ಯದ ಸನಿಹಕ್ಕೆ ಬಂದಾಗ ಮುಗ್ಗರಿಸಿದರು. ಮೂರು ಬಾರಿ ಬಿದ್ದರೂ ಬಿಡದೆ ಗಮ್ಯ ತಲುಪಿದರು.

ADVERTISEMENT

ಕೆಸರು ಗದ್ದೆಯಲ್ಲಿ ನಡೆದ ಹಗ್ಗ ಜಗ್ಗಾಟದಲ್ಲೂ ಸಚಿವ ರವಿ ಭಾಗವಹಿಸಿದ್ದರು. ಕ್ರೀಡಾ ಸಚಿವರ ಉತ್ಸಾಹ–ಉಲ್ಲಾಸ ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಚಿಕ್ಕಮಗಳೂರಿನಲ್ಲಿ ಇದೇ 28ರಿಂದ ಮಾರ್ಚ್‌ 1ರವರೆಗೆ ಚಿಕ್ಕಮಗಳೂರು ಹಬ್ಬ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.