ADVERTISEMENT

ಬೆಳಗಾವಿ ಸೇರಿ 21 ಕಡೆ ಹೊಸ ಸೈನಿಕ ಶಾಲೆ

ಪಿಟಿಐ
Published 26 ಮಾರ್ಚ್ 2022, 19:25 IST
Last Updated 26 ಮಾರ್ಚ್ 2022, 19:25 IST

ನವದೆಹಲಿ: ರಾಜ್ಯದ ಬೆಳಗಾವಿ ಸೇರಿದಂತೆ 21 ಕಡೆ ಹೊಸ ಸೈನಿಕ ಶಾಲೆಗಳನ್ನು ಆರಂಭಿಸಲು ರಕ್ಷಣಾ ಸಚಿವಾಲಯ ಶನಿವಾರ ಅನುಮೋದನೆ ನೀಡಿದೆ.

ಸ್ವಯಂ ಸೇವಾ ಸಂಸ್ಥೆಗಳು, ಖಾಸಗಿ ಶಾಲೆಗಳು ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ದೇಶದಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಘೋಷಿಸಿದ್ದು, ಇದರ ಅಂಗವಾಗಿ 21 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT