ADVERTISEMENT

ಕೈತಪ್ಪಿದ 1.08 ಲಕ್ಷ ಹೆಕ್ಟೇರ್ ಅರಣ್ಯ ಭೂಮಿ

ಇಂಡೀಕರಣದ ನಂತರವೂ ಆರ್‌ಟಿಸಿಗೆ ದಾಖಲಾಗದ ಕಾನನ

ಚಂದ್ರಹಾಸ ಹಿರೇಮಳಲಿ
Published 9 ಫೆಬ್ರುವರಿ 2020, 2:08 IST
Last Updated 9 ಫೆಬ್ರುವರಿ 2020, 2:08 IST
ಅರಣ್ಯ
ಅರಣ್ಯ   

ಶಿವಮೊಗ್ಗ: ಅಧಿಸೂಚನೆಹೊರಡಿಸಿ ದಶಕಗಳು ಕಳೆದರೂ ನಿಗದಿತ ಅರಣ್ಯ ಭೂಮಿಯನ್ನು ಕಂದಾಯ ದಾಖಲೆಗಳಿಗೆ (ಆರ್‌ಟಿಸಿ) ನಮೂದಿಸದ ಕಾರಣ ಜಿಲ್ಲೆಯ 1.08 ಲಕ್ಷ ಹೆಕ್ಟೇರ್ ಅರಣ್ಯಭೂಮಿ ಕಳೆದುಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆ ಒಂದು ಕಾಲದಲ್ಲಿ ವೈವಿಧ್ಯಮಯ ಜೀವ ಸಂಕುಲವನ್ನು ಒಳಗೊಂಡನಿತ್ಯ ಹರಿದ್ವರ್ಣದ ಕಾನನಕ್ಕೆ ಹೆಸರಾಗಿತ್ತು.ಅವ್ಯಾಹತ ಅರಣ್ಯ ನಾಶದ ಪರಿಣಾಮ ಪರಿಸರ ಅಸಮತೋಲನಸೃಷ್ಟಿಯಾಗಿತ್ತು. ಕೆಲವು ಪರಿಸರಸಂಘಟನೆಗಳ ಕಾರ್ಯಕರ್ತರು ಇದರ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಅರಣ್ಯಭೂಮಿಯನ್ನು ನಿರ್ದಿಷ್ಟವಾಗಿ ಗುರುತಿಸಿ, ಇಂಡೀಕರಣ ಮಾಡುವಂತೆ ಕೋರ್ಟ್ ಸೂಚಿಸಿತ್ತು.ಆಗಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ 3.61 ಹೆಕ್ಟೇರ್ ಅರಣ್ಯ ಭೂಮಿ ಇರುವುದಾಗಿಅಫಿಡವಿಟ್‌ ಸಲ್ಲಿಸಿದ್ದರು.ನಂತರ ಕಂದಾಯ ದಾಖಲೆಗಳಲ್ಲಿ ಅರಣ್ಯಭೂಮಿ ನಮೂದಿಸುವ ಕಾರ್ಯ ಆರಂಭವಾಗಿತ್ತು.3.61 ಹೆಕ್ಟೇರ್ಅರಣ್ಯದಲ್ಲಿ ಇದುವರೆಗೂ ಆರ್‌ಟಿಸಿಯಲ್ಲಿ ನಮೂದಾಗಿರುವುದು 2.52 ಲಕ್ಷ ಹೆಕ್ಟೇರ್. ಉಳಿದ1.08 ಲಕ್ಷ ಹೆಕ್ಟೇರ್ನಮೂದಾಗಲೇ ಇಲ್ಲ.

ADVERTISEMENT

ಒತ್ತುವರಿದಾರರಿಗೆ ಅದೃಷ್ಟ: ಅಫಿಡವಿಟ್‌ನಲ್ಲಿಹೇಳಿದಂತೆಅರಣ್ಯ ಭೂಮಿಯ ಶೇ 30.10ರಷ್ಟು ಪ್ರದೇಶ ಕಂದಾಯ ಇಲಾಖೆಯ ಆರ್‌ಟಿಸಿಗಳಲ್ಲಿ ನಮೂದಾಗಿಲ್ಲ. ಹಳೆಯ ದಾಖಲೆಗಳಲ್ಲಿ ಇತರೆ ಕಂದಾಯ ಭೂಮಿ ಎಂದೇ ಇದೆ. ಕಾರಣ ಇಂತಹ ಭೂಮಿಯನ್ನು ಸ್ಥಳೀಯರು ನಿರಂತರವಾಗಿ ಕಡಿದು ಸಾಗುವಳಿ ಮಾಡಿದ್ದಾರೆ. ಅಡಿಕೆ, ಶುಂಠಿ, ರಬ್ಬರ್ ಬೆಳೆಗಳು ಎಲ್ಲೆಡೆ ತಲೆ ಎತ್ತಿವೆ. ಈ ಪ್ರದೇಶಗಳ ಒತ್ತುವರಿದಾರರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದರೂ ದಾಖಲೆಗಳಲ್ಲಿ ಅರಣ್ಯ ಎಂದು ನಮೂದಾಗದ ಕಾರಣ ಕಾನೂನು ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮಭದ್ರಾವತಿ ತಾಲ್ಲೂಕಿನಲ್ಲಿ 37,202ಹೆಕ್ಟೇರ್, ಶಿವಮೊಗ್ಗದಲ್ಲಿ28,158ಹೆಕ್ಟೇರ್, ಸಾಗರದಲ್ಲಿ 30,495ಹೆಕ್ಟೇರ್, ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ 12,890ಹೆಕ್ಟೇರ್‌ ಅರಣ್ಯಕಳೆದುಕೊಳ್ಳಲಾಗಿದೆ.

‘ಜಲಾಶಯಗಳು, ಕೃಷಿ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಉಳಿದಿರುವ ಅರಣ್ಯ ಸಂರಕ್ಷಣೆಗೆ ಜಿಲ್ಲಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನೋಟಿಫಿಕೇಷನ್ ಆದ ಭೂಮಿಯನ್ನು ಆರ್‌ಟಿಸಿಯಲ್ಲಿ ನಮೂದಿಸಬೇಕು. ಒತ್ತುವರಿ ಭೂಮಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್‌ನ ಕೇಂದ್ರ ಅಧಿಕಾರ ಸಮಿತಿಗೆ ದೂರು ನೀಡಲಾಡಲಾಗುವುದು’ ಎಂದು ಎಚ್ಚರಿಸುತ್ತಾರೆ ಹೊಸನಗರ ಜನ ಸಂಗ್ರಾಮ ಪರಿಷತ್ ಮುಖಂಡ ಗಿರೀಶ್ ಆಚಾರ್.

***

ಬಾಕಿ ಇರುವ ಅರಣ್ಯ ಭೂಮಿಯನ್ನು ಆರ್‌ಟಿಸಿಯಲ್ಲಿ ನಮೂದಿಸುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿದೆ. ಶೀಘ್ರ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ

-ಶ್ರೀನಿವಾಸುಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.