
ಪ್ರಜಾವಾಣಿ ವಾರ್ತೆ
ಬೆಂಗಳೂರು: ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಜ್ಯದ 10 ಶಾಲೆಗಳಿಗೆ ‘ಮಿಷನ್ ಪ್ರಕೃತಿ’ ಪ್ರಶಸ್ತಿ ಲಭಿಸಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ‘ಮಿಷನ್ ಪ್ರಕೃತಿ: ತರಗತಿಯಿಂದ ಸಂರಕ್ಷಣೆಯತ್ತ ಕಾರ್ಯಕ್ರಮ’ದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಬಳ್ಳಾರಿಯ ಎಮ್ಮಿಗನೂರು ಶಾಲೆ, ಬೆಳಗಾವಿಯ ಕಾತ್ರಾಳ, ಚಿಕ್ಕಬಳ್ಳಾಪುರದ ಅಲೀಪುರ, ದಾವಣಗೆರೆ ಜಿಲ್ಲೆಯ ಹಿರೇಗೋಣಿಗೆರೆ, ಕಲಘಟಗಿಯ ಜೋಡಳ್ಳಿ, ಉಡುಪಿಯ ಕೋಟೇಶ್ವರ, ದಕ್ಷಿಣ ಕನ್ನಡದ ಅಳಿಯೂರು, ಚಾಮರಾಜನಗರದ ಯಳಂದೂರು, ಉಡುಪಿಯ ಹಕ್ಲಾಡಿ ಹಾಗೂ ಮಲ್ಲೂರು ಪ್ರಶಸ್ತಿ ಪುರಸ್ಕೃತವಾದ ಶಾಲೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.