ADVERTISEMENT

ಫೆಮಾ ಉಲ್ಲಂಘನೆ ಆರೋಪ: ಇ.ಡಿ ವಿಚಾರಣೆಗೆ ಶಾಸಕ ಕೆ.ಜೆ. ಜಾರ್ಜ್ ಹಾಜರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 7:30 IST
Last Updated 16 ಜನವರಿ 2020, 7:30 IST
ಶಾಸಕ ಕೆ.ಜೆ. ಜಾರ್ಜ್
ಶಾಸಕ ಕೆ.ಜೆ. ಜಾರ್ಜ್    

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ( ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಕೆ.ಜೆ. ಜಾರ್ಜ್ ಗುರುವಾರ ಬೆಳಿಗ್ಗೆ ಜಾರಿ ನಿರ್ದೇನಾಲಯದಲ್ಲಿ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು.

ತಮ್ಮ ಲೆಕ್ಕ ಪರಿಶೋಧಕರ ಜೊತೆ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಜಾರ್ಜ್ ಬಂದರು. ಪತ್ನಿ ಸುಜಾ, ಮಕ್ಕಳಾದ ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಸಮೇತ ಜ.16ರಂದು ಹಾಜರಾಗುವಂತೆ ಡಿ. 23 ರಂದು ಜಾರ್ಜ್ ಅವರಿಗೆ ಇ.ಡಿ ನೋಟಿಸ್ ನೀಡಿತ್ತು. ಆದರೆ, ಜಾರ್ಜ್ ಒಬ್ಬರೇ ಇ.ಡಿ ಅಧಿಕಾರಿ ರಾಹುಲ್ ಸಿನ್ಹಾ ಎದುರು ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT