ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿರುವ ಅಭ್ಯರ್ಥಿ ಬಿ.ಆರ್.ಅನಿಲ್ ಕುಮಾರ್ ಅವರಿಗೆ ಮತ ಹಾಕಲು ಜೆಡಿಎಸ್ ನಿರ್ಧರಿಸಿದೆ.
ಆದರೆ, ಕಾಂಗ್ರೆಸ್ ಈ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹಾದಿ ಸುಗಮವಾಗಲಿದೆ.
ಬೆಳಿಗ್ಗೆ 9ಕ್ಕೆ ಮತದಾನ ಆರಂಭವಾಗಲಿದ್ದು, ಸಂಜೆ 4ಕ್ಕೆ ಮತದಾನ ಮುಕ್ತಾಯವಾಗುತ್ತದೆ. ಸಂಜೆ 5ಕ್ಕೆ ಮತಗಳ ಎಣಿಕೆ ಆರಂಭವಾಗುತ್ತದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವ ಸಂಬಂಧ ತನ್ನ ಎಲ್ಲ ಶಾಸಕರಿಗೂಬಿಜೆಪಿ ವಿಪ್ ಜಾರಿ ಮಾಡಿದೆ. ಆದರೆ, ಜೆಡಿಎಸ್ ವಿಪ್ ಜಾರಿಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.