ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 21:04 IST
Last Updated 13 ಆಗಸ್ಟ್ 2020, 21:04 IST
ಮಳೆ (ಸಂಗ್ರಹ ಚಿತ್ರ)
ಮಳೆ (ಸಂಗ್ರಹ ಚಿತ್ರ)   
""

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮತ್ತು ಉತ್ತರ ಕರ್ನಾಟಕದ ಕೆಲವು ಕಡೆ ಗುರುವಾರ ಸಾಧಾರಣ ಮಳೆ ಆಗಿದೆ.

ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹೊಲದಲ್ಲಿ ನೀರು ನಿಂತು, ಬೆಳೆ ಹಾನಿಯಾಗಿದೆ. ಉತ್ತರ ಕನ್ನಡದ ಶಿರಸಿ, ಹುಬ್ಬಳ್ಳಿ–ಧಾರವಾಡ, ಬೆಳಗಾವಿಯ ಖಾನಾಪುರ, ದಾವಣಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ತುಂತುರು ಮಳೆಯಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿಮಳೆ ಪ್ರಮಾಣ ಕಡಿಮೆಯಾಗಿದೆ.

ADVERTISEMENT

ಇಂದಿನಿಂದ ತಲಕಾವೇರಿಯಲ್ಲಿ ಪೂಜೆ
ಮಡಿಕೇರಿ:
ತಲಕಾವೇರಿಯಲ್ಲಿ ಶುಕ್ರವಾರದಿಂದ ನಿತ್ಯದ ಪೂಜೆ ಆರಂಭಿಸಲು ಭಾಗಮಂಡಲ– ತಲಕಾವೇರಿ ವ್ಯವಸ್ಥಾಪನಾ ಸಮಿತಿ ಸಿದ್ಧತೆ ನಡೆಸಿದೆ. ಬೆಟ್ಟ ಕುಸಿತದ ದುರಂತದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್‌ ಮೃತಪಟ್ಟಿದ್ದರಿಂದ ವಾರದಿಂದ ಪೂಜೆ ನಡೆದಿರಲಿಲ್ಲ.ವಿವಿಧ ಗ್ರಾಮದ ಯುವಕರು ಗುರುವಾರ ಕ್ಷೇತ್ರಕ್ಕೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಿದರು.

ಶಾಸಕ ಕೆ.ಜಿ.ಬೋಪಯ್ಯ ಸಹ ತಲಕಾವೇರಿಗೆ ಬಂದು ವ್ಯವಸ್ಥೆ ‍ಪರಿಶೀಲಿಸಿದರು.ಕೇರಳದ ತಂತ್ರಿಯ ನೇತೃತ್ವದಲ್ಲಿ ಪೂಜೆ ಆರಂಭಗೊಳ್ಳಲಿದೆ.ಬೆಟ್ಟ ಕುಸಿತದಿಂದ ಕಣ್ಮರೆಯಾದ ಮೂವರ ಸುಳಿವು ಎಂಟು ದಿನ ಕಳೆದರೂ ಸಿಕ್ಕಿಲ್ಲ. ಶೋಧ ಕಾರ್ಯ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.