ADVERTISEMENT

ಚಿತ್ರಗಳಲ್ಲಿ ನೋಡಿ: ಮಹಾ ಮಳೆಗೆ ಹಂಪಿಯ ಇನ್ನಷ್ಟು ಸ್ಮಾರಕಗಳು ಮುಳುಗಡೆ

ಹೊಸಪೇಟೆ (ವಿಜಯನಗರ):ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ಗುರುವಾರ 1.41 ಲಕ್ಷ ಕ್ಯುಸೆಕ್ ನೀರು ಹರಿಸಿರುವುದರಿಂದ ಹಂಪಿ ರಾಮ–ಲಕ್ಷ್ಮಣ ದೇವಸ್ಥಾನ, ಅದಕ್ಕೆ ಹೊಂದಿಕೊಂಡಿರುವ ಸಾಲು ಮಂಟಪಗಳು, ಕರ್ಮ ಮಂಟಪ ಮುಳುಗಿದೆ.ಹಂಪಿಯ ಸ್ನಾನಘಟ್ಟ, ಚಕ್ರತೀರ್ಥ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಕಂಪ್ಲಿ-ಗಂಗಾವತಿ ಸೇತುವೆ ಬುಧವಾರವೇ ಮುಳುಗಡೆಯಾಗಿದ್ದವು.ನದಿಯಲ್ಲಿ ಸತತ ನೀರಿನ ಹರಿವು ಹೆಚ್ಚಾಗುತ್ತಿದ್ದು, ನದಿ ತೀರದಲ್ಲಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಇನ್ನಷ್ಟೇ ಹಾನಿಯ ಪ್ರಮಾಣ ಗೊತ್ತಾಗಬೇಕಿದೆ. ಒಟ್ಟು 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 97.753 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 1,04,503 ಕ್ಯುಸೆಕ್ ಒಳಹರಿವು ದಾಖಲಾಗಿದೆ.ಚಿತ್ರಗಳು: ರಾಚಯ್ಯ ಎಸ್‌. ಸ್ಥಾವರಿಮಠ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 14:38 IST
Last Updated 14 ಜುಲೈ 2022, 14:38 IST
ರಾಮ ಲಕ್ಷ್ಮಣ ಗುಡಿ, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ರಾಮ ಲಕ್ಷ್ಮಣ ಗುಡಿ, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ   
ಹಂಪಿ ಸಾಲು ಮಂಟಪ, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ಹಂಪಿ ದೇವಸ್ಥಾನದ ಆನೆ ಲಕ್ಷ್ಮಿ ನದಿ ನೀರಿನಲ್ಲಿ ನೀರಾಟ ಆಡುತ್ತಿರುವುದು, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ನದಿ ಉಕ್ಕಿ ಹರಿಯುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿರುವ ಹಂಪಿ ಪ್ರವಾಸಿಗರು, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ
ಹಂಪಿ ಕರ್ಮ ಮಂಟಪ, ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.