ADVERTISEMENT

ಸಿಎಎ ವಿರುದ್ಧ ಪ್ರತಿಭಟನೆ ತಡೆಗೆ ನಿಷೇಧಾಜ್ಞೆ ಜಾರಿ ಸರಿ: ಸಂಸದ ಜಿ.ಎಸ್.ಬಸವರಾಜು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 6:59 IST
Last Updated 14 ಫೆಬ್ರುವರಿ 2020, 6:59 IST
ಸಂಸದ ಜಿ.ಎಸ್.ಬಸವರಾಜು
ಸಂಸದ ಜಿ.ಎಸ್.ಬಸವರಾಜು   

ತುಮಕೂರು: ಸಿಎಎ ವಿರುದ್ಧ ಪ್ರತಿಭಟನೆಗಳು ಹೆಚ್ಚಿ ಸಮಾಜದ ಶಾಂತಿ ಹಾಳಾಗುತ್ತಿತ್ತು. ಸಮಾಜ ಘಾತುಕ ಶಕ್ತಿಗಳು ಊರುಗಳನ್ನೆ ಸುಟ್ಟು ಹಾಕುವ ಸಾಧ್ಯತೆ ಇತ್ತು. ಅದನ್ನು ತಡೆಯಲೆಂದೇ ರಾಜ್ಯ ಸರ್ಕಾರ 144ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿತ್ತು ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರು ಹೇಳಿದರು.

ಪ್ರತಿಭಟನೆ ವೇಳೆ ಹೇರಿದ್ದ ನಿಷೇಧಾಜ್ಞೆಯನ್ನು 'ಕಾನೂನು ಬಾಹಿರ' ಎಂದು ಹೈಕೋರ್ಟ್ ಹೇಳಿದೆಯಲ್ಲ ಎಂಬ ಪ್ರಶ್ನೆಗೆಈ ಪ್ರತಿಕ್ರಿಯೆ ನೀಡಿದರು.

ಶಾಂತಿ ಕದಡುವ ದುಷ್ಟರಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಡವೆ, ₹500ಬಾಡಿಗೆ ಗುಂಡಾಗಳನ್ನು ತಂದು ಬೆಂಕಿ ಹಚ್ಚಿದರೆ ಯಾರ್ರಿ ಕಾಯ್ತಾರೆ. ಅವರನ್ನು ನಿಯಂತ್ರಣ ಮಾಡೋದು ಬೇಡವೆ. ಸಮಾಜದ ಶಾಂತಿಗಾಗಿಯೇ ಆ ಕ್ರಮ ಕೈಗೊಂಡಿತ್ತು ಎಂದು ಅವರು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ADVERTISEMENT

ತುಮಕೂರುಹೇಮಾವತಿ ನಾಲೆಯ 70ಕಿ.ಮೀ.ನ ಗುರುತಿನಿಂದ ಲಿಂಕಿಂಗ್ ಎಕ್ಸ್‌ಪ್ರೆಸ್‌ ಕೆನಾಲ್ ನಿರ್ಮಿಸಿ ಕುಣಿಗಲ್, ರಾಮನಗರಕ್ಕೆ ನೀರು ಹರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಲು ತೀರ್ಮಾನಿಸಿದೆ ಎಂದ ಅವರು, ಈಕುರಿತು ಮುಂದಿನ ವಾರದ ಸಚಿವ ಸಂಪುಟದ ಸಭೆಯಲ್ಲಿ ಅಧಿಕೃತ ಆದೇಶ ಹೊರಬರಲಿದೆ ಎಂದು ಸಂಸದರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.