ADVERTISEMENT

ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ: ಪ್ರಸಾದ್

‘ಸಂಪುಟ ರಚನೆ: ಸದ್ಯಕ್ಕೆ ಸಿ.ಎಂಗೆ ಪರಮಾಧಿಕಾರ ಇಲ್ಲ’

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:16 IST
Last Updated 23 ಆಗಸ್ಟ್ 2019, 20:16 IST
ವಿ.ಶ್ರೀನಿವಾಸಪ್ರಸಾದ್
ವಿ.ಶ್ರೀನಿವಾಸಪ್ರಸಾದ್   

ಮೈಸೂರು: 'ಸಿದ್ದರಾಮಯ್ಯ ಹಾಗೂ ಎಚ್‌.ಡಿ.ದೇವೇಗೌಡ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ' ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಟೀಕಿಸಿದರು.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರಿಗೂ ಮಂತ್ರಿ ಸ್ಥಾನ ಸಿಗಲಿದೆ. ಅವರು ಸ್ವಇಚ್ಛೆಯಿಂದ ಬಿಜೆಪಿಗೆ ಬಂದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಿಂದಲೇ ಸ್ಪರ್ಧಿಸಲಿದ್ದಾರೆ’ ಎಂದು ಶುಕ್ರವಾರ ಹೇಳಿದರು.

‘ಸಂಪುಟ ರಚನೆಯಲ್ಲಿ ಸಿ.ಎಂಗೆ ಪರಮಾಧಿಕಾರ ಇದೆ. ಈಗಿನ ಸ್ಥಿತಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿಯೇ ನಿರ್ಧರಿಸಬೇಕಾಗಿದೆ’ ಎಂದರು.

ADVERTISEMENT

ಮೊದಲೇ ಎಚ್ಚರಿಸಿದ್ದೆ –ಮಂಜು: ‘ಜೆಡಿಎಸ್‌ ಜೊತೆ ಹೋದರೆ ಉಳಿಗಾಲ ಇಲ್ಲ ಎಂದು ಆರು ತಿಂಗಳ ಹಿಂದೆಯೇ ಸಿದ್ರಾಮಣ್ಣಗೆ ಎಚ್ಚರಿಸಿದ್ದೆ. ನನ್ನ ಮಾತು ಕೇಳಿದ್ದರೆ ಇಷ್ಟೊಂದು ಅನಾಹುತ ಉಂಟಾಗುತ್ತಿರಲಿಲ್ಲ' ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.

‘ಲೋಕಸಭೆ ಚುನಾವಣೆ ವೇಳೆ ಹಾಸನ ಕ್ಷೇತ್ರಕ್ಕೆ ಬಂದಿದ್ದ ಸಿದ್ರಾಮಣ್ಣ, ದೇವೇಗೌಡರ ಮಾತು ಕೇಳಿ ನನ್ನ ವಿರುದ್ಧ ಮಾತನಾಡಿದ್ದರು. ಆಗ ನನಗೆ ನೋವಾಗಿತ್ತು’ ಎಂದರು.

*
‘ಇವರಿಬ್ಬರೂ ಜೊತೆಗೂಡಿ ಒಂದು ವರ್ಷ ಸರ್ಕಾರ ನಡೆಸಿದ್ದೇ ಅದ್ಭುತ. ವಿರೋಧ ಪಕ್ಷದಲ್ಲಿರುವ ಇವರು ಈಗಲಾದರೂ ಗಂಭೀರವಾಗಿ ವರ್ತಿಸಬೇಕು.
-ಶ್ರೀನಿವಾಸಪ್ರಸಾದ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.