ADVERTISEMENT

ಪ್ಯಾರಚೂಟ್‌ ರೆಜಿಮೆಂಟ್‌ನಲ್ಲಿ ತರಬೇತಿ ಆರಂಭಿಸಿದ ಧೋನಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 7:53 IST
Last Updated 25 ಜುಲೈ 2019, 7:53 IST
ಮಹೇಂದ್ರ ಧೋನಿ (ಎಎಫ್‌ಪಿ ಚಿತ್ರ)
ಮಹೇಂದ್ರ ಧೋನಿ (ಎಎಫ್‌ಪಿ ಚಿತ್ರ)   

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ದೋನಿ ಅವರುಟೆರಿಟೋರಿಯಲ್‌ ಆರ್ಮಿಯ ಪ್ಯಾರಚೂಟ್‌ ರೆಜಿಮೆಂಟ್‌ನಲ್ಲಿ ತರಬೇತಿ ಆರಂಭಿಸಿದ್ದಾರೆ. ರೆಜಿಮೆಂಟ್‌ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿದ್ದು, ಅವರು ಬುಧವಾರವೇ ಬೆಟಾಲಿಯನ್‌ ಕೂಡಿಕೊಂಡರು.

ತರಬೇತಿ ಸಲುವಾಗಿ ಕ್ರಿಕೆಟ್‌ನಿಂದ ಎರಡು ತಿಂಗಳು ಬ್ರೇಕ್‌ ಪಡೆಯುವುದಾಗಿ ದೋನಿ ಬಿಸಿಸಿಐಗೆ ತಿಳಿಸಿದ್ದರು. ಹೀಗಾಗಿ ಅವರು ಆಗಸ್ಟ್‌ 3ರಿಂದ ವೆಸ್ಟ್‌ಇಂಡೀಸ್‌ ವಿರುದ್ಧ ಆರಂಭವಾಗಲಿರುವ ಮೂರು ಟಿ20, ಮೂರು ಏಕದಿನ ಪಂದ್ಯಗಳ ಸರಣಿಯಿಂದ ಹಿಂದೆ ಸರಿದಿದ್ದರು.

2015ರಲ್ಲಿ ಆಗ್ರಾ ವಾಯುಸೇನಾ ಶಿಬಿರದಲ್ಲಿ ನಡೆದಿದ್ದತರಬೇತಿ ವೇಳೆ ಪ್ಯಾರಾಚೂಟ್‌ ಮೂಲಕ ಜಿಗಿಯುವ ತರಬೇತಿ ಪೂರ್ಣಗೊಳಸಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ADVERTISEMENT

ಧೋನಿ, ಶೂಟರ್‌ ಅಭಿನವ್‌ ಬೀಂದ್ರಾ ಹಾಗೂ ವಿಜ್ಞಾನಿ ದೀಪಕ್‌ ರಾವ್‌ ಅವರಿಗೆ ಟೆರಿಟೋರಿಯಲ್‌ ಆರ್ಮಿಯ ಪ್ಯಾರಾಚೂಟ್‌ ರೆಜಿಮೆಂಟ್‌ನಗೌರವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು 2011ರಲ್ಲಿ ಪ್ರದಾನ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.