ಈಶ್ವರಾನಂದಪುರಿ ಸ್ವಾಮೀಜಿ
ಬೆಂಗಳೂರು: ಕುರಿ ಹೊಲಸು ತಿನ್ನಲ್ಲ, ಕುರುಬ ತಪ್ಪುಮಾಡಲ್ಲ. ಯಾವ ಅಕ್ರಮವನ್ನೂ ಮಾಡದ ಸಿದ್ದರಾಮಯ್ಯ ಅವರ ಪರವಾಗಿ ನಾವೆಲ್ಲರೂ ಇರುತ್ತೇವೆ. ಬೃಹತ್ ಜನಾಂದೋಲನ ರೂಪಿಸುತ್ತೇವೆ ಎಂದು ಹೊಸದುರ್ಗ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಪಾಲರು ದುರುದ್ದೇಶದಿಂದ, ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ.
ಒಂದು ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಗೌರವ. ಅಷ್ಟಕ್ಕೂ ಅಧಿಕಾರದಲ್ಲಿರುವುದು ಹಿಂದುಳಿದ ವರ್ಗದ ಪ್ರಬಲ ಜನನಾಯಕ. ಅವರು ದೀನರು, ದುರ್ಬಲರು, ಮಹಿಳೆಯರೂ ಸೇರಿದಂತೆ ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವ ನಾಯಕ. ಅವರ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಸಹಿಸಲಾಗದ ಪಟ್ಟಬದ್ರ ಹಿತಾಸಕ್ತಿಗಳು ಕುತಂತ್ರ ಮಾಡಿದ್ದಾರೆ. ರಾಜ್ಯದ ಶೋಷಿತ ಸಮುದಾಯ ಸಹಿಸುವುಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.