ADVERTISEMENT

ಅಮಿತ್‌ ಶಾ ಭಾಷಣ ಕೇಳಿ ಎಂದು ಮುಂಗಾರು ಮಳೆ ಹಾಡು ಕೇಳಿಸಿದ ಬಿಜೆಪಿ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 14:06 IST
Last Updated 18 ಜನವರಿ 2020, 14:06 IST
   

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್‌ ಶಾ ಅವರ ಕಾರ್ಯಕ್ರಮದ ನೇರ ಪ್ರಸಾರನೋಡಿ ಎಂದು ಟ್ವೀಟ್‌ ಮಾಡಿದ್ದ ಬಿಜೆಪಿ, ವಿಡಿಯೊದಲ್ಲಿ ಮುಂಗಾರು ಮಳೆ ಹಾಡು ಪ್ರಸಾರ ಮಾಡಿದೆ.

ಹುಬ್ಬಳ್ಳಿ ಸಮಾವೇಶವನ್ನು ನೇರ ಪ್ರದರ್ಶನ ಮಾಡುವುದಾಗಿಬಿಜೆಪಿ ತನ್ನ ಟ್ವಿಟರ್‌ ಖಾತೆ ಮೂಲಕ ವಿಡಿಯೊ ಹಂಚಿಕೊಂಡಿತ್ತು. ಸರಿ ಸುಮಾರು2.31 ಗಂಟೆಗಳ ಆ ವಿಡಿಯೊದ ಆರಂಭದ 21 ನಿಮಿಷಗಳ ಕಾಲ ‘ಮುಂಗಾರು ಮಳೆ’ ಸಿನಿಮಾದ ಹಾಡುಗಳೇ ಕೇಳಿ ಬರುತ್ತವೆ. ನಂತರದ ಒಂದೂವರೆ ಘಂಟೆಗಳ ಕಾಲ ಈ ವಿಡಿಯೊದಲ್ಲಿ ಯಾವುದೇ ದೃಶ್ಯಾವಳಿಗಳು ಕಾಣಸಿಗುವುದಿಲ್ಲ.ಆಡಿಯೊಕೂಡ ಕೇಳುವುದಿಲ್ಲ.

2.01 ಗಂಟೆ ನಂತರ ಅಮಿತ್‌ ಶಾ ಅವರ ಭಾಷಣದ ದೃಶ್ಯಾವಳಿಗಳು ಕಾಣಿಸುತ್ತವೆ. ಭಾಷಣ ಅರ್ಧ ಗಂಟೆಯಲ್ಲೇ ಮುಕ್ತಾಯಗೊಳ್ಳುತ್ತದೆ.

ADVERTISEMENT

ಟ್ವೀಟ್‌ ಡಿಲಿಟ್‌

ವರದಿ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಹಾಡಿನೊಂದಿಗೆ ಆರಂಭವಾಗುವ ವಿಡಿಯೊವನ್ನು ಡಿಲಿಟ್‌ ಮಾಡಿದೆ. ‘ಬಿಜೆಪಿ ಇಂಡಿಯಾ’ ಹಂಚಿಕೊಂಡಿದ್ದ ಅಮಿತ್‌ ಶಾ ಅವರ ಭಾಷಣವನ್ನು ರೀ ಟ್ವೀಟ್‌ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.