ADVERTISEMENT

ಬಸವಪ್ರಭು ಸ್ವಾಮೀಜಿ ಮಠದ ಉಸ್ತುವಾರಿ | ಕಾರಾಗೃಹದಿಂದಲೇ ನೇಮಕ ಮಾಡಿದ ಮುರುಘಾ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 21:34 IST
Last Updated 16 ಅಕ್ಟೋಬರ್ 2022, 21:34 IST
ಬಸವಪ್ರಭು ಸ್ವಾಮೀಜಿ
ಬಸವಪ್ರಭು ಸ್ವಾಮೀಜಿ   

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಪೂಜಾ ಕೈಂಕರ್ಯ ಹಾಗೂ ದೈನಂದಿನ ಚಟುವಟಿಕೆಯ ಉಸ್ತುವಾರಿಗೆ ದಾವಣಗೆರೆಯ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ಶಿವಮೂರ್ತಿ ಮುರುಘಾ ಶರಣರು ನೇಮಕ ಮಾಡಿದ್ದಾರೆ.

ಹೈಕೋ‌ರ್ಟ್‌ನ ಅನುಮತಿ ಪಡೆದು ಕಾರಾಗೃಹದಲ್ಲಿ ಈ ಪ್ರಕ್ರಿಯೆ ಶನಿವಾರ ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಮಠವು ಭಾನುವಾರ ಪ್ರಕಟಣೆ ನೀಡಿದೆ. ಈ ನೇಮಕ ತಾತ್ಕಾಲಿಕ ಅವಧಿಗೆ ಸೀಮಿತವಾಗಿದೆ. ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಈವರೆಗೆ ಪ್ರಭಾರ ಪೀಠಾಧ್ಯಕ್ಷರಾಗಿದ್ದರು.

ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿ ಕಾರಾಗೃಹದಲ್ಲಿರುವ ಮುರುಘಾ ಶರಣರು ಮಠದ ಉಸ್ತುವಾರಿ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಅ.12ರಂದು ನ್ಯಾಯಾಲಯದ ಅನುಮತಿ ಪಡೆದು ಕಾರಾಗೃಹ ಅಧೀಕ್ಷಕರನ್ನು ಸಂಪರ್ಕಿಸಲಾಗಿತ್ತು. ಕಾನೂನು ಪ್ರಕಾರ ಉಸ್ತುವಾರಿ ನೇಮಕದ ಪ್ರಕ್ರಿಯೆ ಪೂರ್ಣಗೊಳಿಸಲು ಅ.15ರಂದು ಕಾಲಾವಕಾಶ ನಿಗದಿಪಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.