ADVERTISEMENT

‘ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:00 IST
Last Updated 18 ಫೆಬ್ರುವರಿ 2019, 20:00 IST
ಸಂಜೀವ್ ಅಭಯಂಕರ್
ಸಂಜೀವ್ ಅಭಯಂಕರ್   

ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸುವ ಉದ್ದೇಶದಿಂದ ‘ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ ಇದೇ 22ರ ಸಂಜೆ 6.45ಕ್ಕೆ ನಗರದ ಚೌಡಯ್ಯ ಸಭಾಂಗಣದಲ್ಲಿ ನಡೆಯಲಿದೆ.

ಸಂಗೀತೋತ್ಸವದಲ್ಲಿ ಕಲಾವಿದರಾದ ಡಾ. ಉಮಾಯಾಲ್ಪುರಂ ಕೆ. ಶಿವರಾಮನ್ ಅವರು ಮೃದಂಗ ವಾದ್ಯವನ್ನು ನುಡಿಸಲಿದ್ದು, ಜಯಂತಿ ಕುಮರೇಶ್ ವೀಣೆಯನ್ನು ಹಾಗೂ ಆರ್. ಕುಮರೇಶ್ ವಯೊಲಿನ್ ನುಡಿಸಲಿದ್ದಾರೆ. ಗಾಯನದಲ್ಲಿ ಅಶ್ವಿನಿ ಭಿಂದೆ ದೇಶಪಾಂಡೆ ಅವರೊಂದಿಗೆ ಸಂಜೀವ್ ಅಭಯಂಕರ್ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

ಸ್ಪ್ಲೆಂಡರ್ ಆಫ್ ಮಾಸ್ಟರ್ಸ್‌ನಲ್ಲಿ ಖ್ಯಾತ ಸಂಗೀತಗಾರರು ತಮ್ಮ ಪಾಂಡಿತ್ಯವನ್ನು ಉತ್ಸವದಲ್ಲಿ ಪ್ರದರ್ಶಿಸಲಿದ್ದಾರೆ. ಇದು 11ನೇ ಆವೃತ್ತಿಯ ‘ಸ್ಪ್ಲೆಂಡರ್ ಆಫ್ ಮಾಸ್ಟರ್ಸ್’ ಸಂಗೀತೋತ್ಸವ ಆಗಿದ್ದು, ವಿಭಿನ್ನವಾದ ಸಂಗೀತ ಕಛೇರಿಗಳನ್ನು ಪರಿಚಯವಾಗಲಿದೆ. ವಿಶೇಷವಾಗಿ ಸಂಗೀತಗಾರರು ಜುಗಲ್ ಬಂದಿ ಮತ್ತು ಏಕವ್ಯಕ್ತಿ ಪಾಂಡಿತ್ಯವನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.

ADVERTISEMENT

ಈ ಸಂಗೀತೋತ್ಸವ ಇದೇ 22 ರಂದು ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ನಂತರ ಇದೇ 24ರಂದು ಪುಣೆಯಲ್ಲಿ ಕಲಾವಿದರ ವಿಶೇಷ ಸಂಯೋಜನೆಯೊಂದಿಗೆ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.