ADVERTISEMENT

ಉರುಸ್‌ ಸಭೆಗೆ ಗೈರಾಗಲು ನಿರ್ಧಾರ: ಮುಸ್ಲಿಂ ಒಕ್ಕೂಟ ಮತ್ತು ಉರುಸ್‌ ಸಮಿತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:01 IST
Last Updated 22 ಫೆಬ್ರುವರಿ 2023, 22:01 IST
ಕೆ.ಮಹಮದ್‌
ಕೆ.ಮಹಮದ್‌   

ಚಿಕ್ಕಮಗಳೂರು: ‘ಬಾಬಾಬುಡನ್‌ಗಿರಿಯಲ್ಲಿ ಮಾರ್ಚ್‌ನಲ್ಲಿ ನಡೆಯುವ ಉರುಸ್‌ ಆಚರಣೆ ಪೂರ್ವಭಾವಿ ಸಭೆಗೆ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ವ್ಯವಸ್ಥಾಪನಾ ಸಮಿತಿಯವರನ್ನು ಜಿಲ್ಲಾಡಳಿತ ಆಹ್ವಾನಿಸಿರುವುದಕ್ಕೆ ನಮ್ಮ ಸಮ್ಮತಿ ಇಲ್ಲ. ಅವರು ಸಭೆಯಲ್ಲಿ ಭಾಗವಹಿಸಿದರೆ ನಾವು ಪಾಲ್ಗೊಳ್ಳುವುದಿಲ್ಲ’ ಎಂದು ಮುಸ್ಲಿಂ ಒಕ್ಕೂಟ ಮತ್ತು ಉರುಸ್‌ ಸಮಿತಿಯ ಮುಖಂಡ ಕೆ.ಮಹಮದ್‌ ತಿಳಿಸಿದರು.

‘ಜಿಲ್ಲಾಧಿಕಾರಿ ಇದೇ 23ಕ್ಕೆ ಉರುಸ್‌ ಆಚರಣೆ ಪೂರ್ವಭಾವಿ ಸಭೆ ನಿಗದಿಪಡಿಸಿದ್ದಾರೆ. ಪ್ರತಿ ವರ್ಷ ಉರುಸ್‌ ಸಮಿತಿ ಸದಸ್ಯರನ್ನು ಮಾತ್ರ ಸಭೆಗೆ ಆಹ್ವಾನಿಸಲಾಗುತ್ತಿತ್ತು. ವ್ಯವಸ್ಥಾಪನಾ ಸಮಿತಿ ರಚನೆ, ಅದರ ಸಿಂಧುತ್ವ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಏರಿದ್ದೇವೆ. ಆ ಸಮಿತಿಯನ್ನು ನಾವು ಒಪ್ಪಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗಿರಿಯ ಗುಹೆಯಲ್ಲಿ ಒಂದು ಸಮುದಾಯದವರ ಹೊಸ ಆಚರಣೆಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿ ಒಂದು ಪಕ್ಷದ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಇದೇ ರೀತಿಯ ಚಟುವಟಿಕೆ ಮಂದುವರಿದರೆ ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಎಚ್ಚರಿಸಿದರು.

ADVERTISEMENT

ಮುಖಂಡರಾದ ಗೌಸ್‌ ಮೊಹಿಯುದ್ದೀನ್‌, ಅಜ್ಮತ್‌, ಸಿ.ಎಸ್‌.ಖಲಂದರ್‌, ಜಂಶೀದ್‌ ಖಾನ್‌, ಗೌಸ್‌ ಮುನೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.