ಬೆಂಗಳೂರು: ಕೊಪ್ಪಳದ ಅಂಗಳ ಪ್ರಕಾಶನ ಪ್ರಕಟಿಸಿರುವ ಜ್ಯೋತಿ ಹಿಟ್ನಾಳ್ ಸಂಪಾದಕತ್ವದ ‘ಮುಟ್ಟು’ ಪುಸ್ತಕ ಗುರುವಾರ (ಆ.13) ಬಿಡುಗಡೆಯಾಗಲಿದೆ.
ಲೇಖಕಿ ಎಚ್.ಎಲ್. ಪುಷ್ಪಾ ಮತ್ತು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪುಸ್ತಕ ಬಿಡುಗಡೆ ಮಾಡುವರು. ಎಚ್.ಎನ್. ಆರತಿ ಮತ್ತು ಚಾಂದ್ ಪಾಷಾ ಅವರು ಪುಸ್ತಕದ ಕುರಿತು ಮಾತನಾಡುವರು.
‘ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಕಾರ್ಯಕ್ರಮ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಫೇಸ್‌ಬುಕ್ ಲಿಂಕ್ (https://www.facebook.com/ejyothi.hitnal) ಬಳಸಿ ವೀಕ್ಷಿಸಬಹುದು. ಮುಟ್ಟಿನ ಅನುಭವದ ಕುರಿತ ಕತೆಯನ್ನು ದಾಖಲಿಸಿ ಬಿಡುಗಡೆಯಾಗುತ್ತಿರುವ ಮೊದಲ ಪುಸ್ತಕ ಇದಾಗಿದೆ’ ಎಂದು ಜ್ಯೋತಿ ಹಿಟ್ನಾಳ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.