ಮೈಸೂರು: ಜಗತ್ಪ್ರಸಿದ್ಧದಸರೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಚಿವರಿಲ್ಲದೇ ದಸರಾ ಸಿದ್ಧತೆಗೆ ಈಗಾಗಲೇ ಹಿನ್ನಡೆ ಉಂಟಾಗಿದೆ. ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯನ್ನು ಈ ಹಂತದಲ್ಲಿ ವರ್ಗಾವಣೆ ಮಾಡಿರುವುದು ಅಚ್ಚರಿ ಉಂಟು ಮಾಡಿದೆ.
ದಸರೆ ಉದ್ಘಾಟನೆಗೆ ಕೇವಲ 35 ದಿನಗಳು ಬಾಕಿ ಇದ್ದು ಹಲವಾರು ಕಾಮಗಾರಿಗಳು ನಡೆಯಬೇಕಿದೆ, ಟೆಂಡರ್ ಕರೆಯಬೇಕಿದೆ, ಉಪಸಮಿತಿ ರಚಿಸಿ ಅಧಿಕಾರಿಗಳ ಸಭೆ ನಡೆಸಬೇಕಿದೆ. ಹೀಗಾಗಿ, ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮುಂದೆ ದೊಡ್ಡ ಸವಾಲು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.