ADVERTISEMENT

ಗುಂಡೇಟಿನಿಂದ ಬಾಂಬ್ ಸ್ಫೋಟಕ್ಕೆ ಕೊಂಡೊಯ್ದ ಶ್ರೇಯ ಕಾಂಗ್ರೆಸ್‌ನದ್ದು: ಕಟೀಲ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 11:37 IST
Last Updated 27 ನವೆಂಬರ್ 2021, 11:37 IST
ಬಾಗಲಕೋಟೆಯಲ್ಲಿ ಶನಿವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ಮಾತನಾಡಿದರು. ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಾ ಹೊಸೂರ, ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್, ರಾಜ್ಯ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶಾಸಕ ದೊಡ್ಡನಗೌಡ ಪಾಟೀಲ ಚಿತ್ರದಲ್ಲಿದ್ದಾರೆ.

ಬಾಗಲಕೋಟೆ: ’ನೆಹರೂ ಕಾಲದಲ್ಲಿ ಒಂದು ಗುಂಡು ಹಾರಿಸಿ ಮಹಾತ್ಮಾ ಗಾಂಧೀಜಿಯನ್ನು ಗೋಡ್ಸೆ ಕೊಂದರು. ನಂತರ ಇಂದಿರಾಗಾಂಧಿ ಕಾಲದಲ್ಲಿ 17 ಗುಂಡು ಹಾರಿಸಿ ಅವರನ್ನೇ ಭಯೋತ್ಪಾದಕರು ಕೊಂದರು. ಮುಂದೆ ರಾಜೀವ್ ಗಾಂಧಿ ಬಾಂಬ್‌ಗೆ ಬಲಿಯಾದರು. ಹೀಗೆ ಭಯೋತ್ಪಾದನೆಯನ್ನು ಒಂದು ಗುಂಡಿನಿಂದ ಬಾಂಬ್‌ ಸ್ಫೋಟದವರೆಗೆ ಬಡ್ತಿ ನೀಡಿ ಪೋಷಿಸಿದ ಶ್ರೇಯ ಕಾಂಗ್ರೆಸ್‌ ಆಡಳಿತಕ್ಕೆ ಸಲ್ಲುತ್ತದೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದಅವರು, ’ಕಾಂಗ್ರೆಸ್ ಕಾಲದಲ್ಲಿ ಭಯೋತ್ಪಾದನೆ ಹೇಗಿತ್ತು ಎಂಬುದಕ್ಕೆ ಇದು ನಿದರ್ಶನ. ಬಿಜೆಪಿ ಆಡಳಿತದ ಅವಧಿಯಲ್ಲಿ ಒಂದೇ ಒಂದು ಭಯೋತ್ಪಾದನೆ ಕೃತ್ಯ ನಡೆದಿಲ್ಲ. ಕಾಶ್ಮೀರ ಬಿಟ್ಟು ಬೇರೆ ಎಲ್ಲಿಯೂ ಒಂದೇ ಒಂದು ಬಾಂಬ್ ಸ್ಫೋಟ ಆಗಿಲ್ಲ. ದೇಶವನ್ನು ಭಯೋತ್ಪಾದನೆ ಪಿಡುಗಿನಿಂದ ಮುಕ್ತಗೊಳಿಸಿದ ಗರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ‘ ಎಂದರು.

‘60 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಬಡತನ ಈ ನಾಲ್ಕು ಕೊಡುಗೆಗಳನ್ನು ಮಾತ್ರ ಕೊಟ್ಟಿದೆ. ಈ ನಾಲ್ಕನ್ನೂ ದೇಶದಿಂದ ಮುಕ್ತಗೊಳಿಸಿದ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಏಳೂವರೆ ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ಧ ಮಾಡುವ ಬಹಳಷ್ಟು ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.