ADVERTISEMENT

ಬೇಲೂರು–ಹಾಸನ ಹೆದ್ದಾರಿ: ಪರಿಷ್ಕೃತ ಮೊತ್ತಕ್ಕೆ ಒಪ್ಪಿಗೆಗೆ ಸಂಸದ ಶ್ರೇಯಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 13:05 IST
Last Updated 3 ಡಿಸೆಂಬರ್ 2025, 13:05 IST
<div class="paragraphs"><p>ರಸ್ತೆ</p></div>

ರಸ್ತೆ

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಬೇಲೂರು–ಹಾಸನ ರಾಷ್ಟ್ರೀಯ ಹೆದ್ದಾರಿ 373 ಚತುಷ್ಪಥ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತಕ್ಕೆ ಕೂಡಲೇ ಅನುಮೋದನೆ ನೀಡಬೇಕು ಎಂದು ಹಾಸನ ಸಂಸದ ಶ್ರೇಯಸ್‌ ‍ಎಂ. ಪಟೇಲ್‌ ಆಗ್ರಹಿಸಿದರು. 

ADVERTISEMENT

ಲೋಕಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಈ ಕಾರಿಡಾರ್ ಅತೀ ಮುಖ್ಯವಾದುದು. ತ್ವರಿತಗತಿಯಲ್ಲಿ ಸರಕು ಸಾಗಣೆಗೆ ಅನುಕೂಲವಾಗಲಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ಮುಂಗಾರು ಮಳೆಯಿಂದಾಗಿ ಈ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ, ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಈ ಬಗ್ಗೆ ಹೆದ್ದಾರಿ ಸಚಿವಾಲಯ ಗಮನ ಹರಿಸಬೇಕು‘ ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.