ADVERTISEMENT

ಬೆಂಗಳೂರು: ಜುಲೈ 1ಕ್ಕೆ ರಾಷ್ಟ್ರೀಯ ಮಟ್ಟದ ಡ್ರೋನ್‌ ಎಕ್ಸ್‌ಪೋ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 15:59 IST
Last Updated 29 ಜೂನ್ 2023, 15:59 IST
ಡ್ರೋನ್‌ (ಪ್ರಾತಿನಿಧಿಕ ಚಿತ್ರ)
ಡ್ರೋನ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಾಷ್ಟ್ರೀಯ ಮಟ್ಟದ ಡ್ರೋನ್‌ ಟೆಕ್‌ ಎಕ್ಸ್‌ಪೋ ಮತ್ತು ಶೃಂಗಸಭೆ ಡಾ. ಅಂಬೇಡ್ಕರ್ ತಾಂತ್ರಿಕ ಮಹಾ‌ವಿದ್ಯಾಲಯದಲ್ಲಿ ಶನಿವಾರ (ಜುಲೈ 1) ನಡೆಯಲಿದೆ.

ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ದಿ ನಿಗಮ (ಎನ್‌ಆರ್‌ಡಿಸಿ), ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ಮಹಾ‌ವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ವಿವಿಧ ಸುಧಾರಿತ, ಆಧುನಿಕ ಡ್ರೋನ್‌ಗಳ ಹಾರಾಟವನ್ನು ವೀಕ್ಷಿಸಬಹುದು.

ಕಾರ್ಯಕ್ರಮದಲ್ಲಿ ಎನ್‌ಆರ್‌ಡಿಸಿ ಪ್ರಾದೇಶಿಕ ಘಟಕದ ಹಿರಿಯ ವ್ಯವಸ್ಥಾಪಕ ಬಿಜಯ್ ಕುಮಾರ್ ಸಾಹು, ಕೇಂದ್ರ ಕಂದಾಯ ಇಲಾಖೆಯ ಉಪ ಆಯುಕ್ತ ಪಿ.ವಿ. ಬೈರಪ್ಪ, ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪುಟ್ಟರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ಎನ್. ಉಮೇಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.